ETV Bharat / sports

ಕಿಂಗ್ ಕೊಹ್ಲಿ ಆಡುವ ಏಕೈಕ ಟೆಸ್ಟ್​ ಪಂದ್ಯದ ಟಿಕೆಟ್​ಗೆ ಭಾರೀ ಬೇಡಿಕೆ - Anushka sharma

ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವುದು ಒಂದೇ ಟೆಸ್ಟ್ ಪಂದ್ಯ ಎಂದು ಖಚಿತವಾದ ನಂತರ ಈ ಬೇಡಿಕೆ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ. ಪತ್ನಿ ಅನುಷ್ಕಾ ಜನವರಿಯಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಹಿನ್ನೆಲೆ ಕೊಹ್ಲಿ ಪಿತೃತ್ವ ರಜೆಯ ಮೇಲೆ ಭಾರತಕ್ಕೆ ಹಿಂತಿರುಗಲಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
author img

By

Published : Nov 14, 2020, 7:19 PM IST

ಸಿಡ್ನಿ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಏಕೈಕ ಟೆಸ್ಟ್​ ಪಂದ್ಯದ ಟಿಕೆಟ್​ಗೆ ಬೇಡಿಕೆ ಬರುತ್ತಿದೆ ಎಂದು ತಿಳಿದು ಬಂದಿದೆ.

ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವುದು ಒಂದೇ ಟೆಸ್ಟ್ ಪಂದ್ಯ ಎಂದು ಖಚಿತವಾದ ನಂತರ ಈ ಬೇಡಿಕೆ ಸೃಷ್ಟಿಯಾಗಿದೆ ಎನ್ನಲಾಗಿದೆ. ಪತ್ನಿ ಅನುಷ್ಕಾ ಜನವರಿಯಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಹಿನ್ನೆಲೆ ಕೊಹ್ಲಿ ಪಿತೃತ್ವ ರಜೆಯ ಮೇಲೆ ಭಾರತಕ್ಕೆ ಹಿಂತಿರುಗಲಿದ್ದಾರೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸ್ವಾಮಿ ಆರ್ಮಿ ಎಂಬ ಅಭಿಮಾನಿಗಳ ಗುಂಪನ್ನು ನಡೆಸುತ್ತಿರುವ ಮೆಲ್ಬೋರ್ನ್​ ಮೂಲದ ಕೆಫೆ ಮಾಲೀಕ ಅಂಗಧ್ ಸಿಂಗ್​ ಒಬೆರಾಯ್ ಅವರ ಪ್ರಕಾರ ಮೊದಲ ಟೆಸ್ಟ್​ ಪಂದ್ಯದ ಟಿಕೆಟ್​ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಮತದಾನದ ಮೂಲಕ ಟಿಕೆಟ್​ ಲಭ್ಯತೆಯನ್ನ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಮೊದಲ ಟೆಸ್ಟ್​ ಹಗಲು-ರಾತ್ರಿ ಪಂದ್ಯವಾಗಿರುವುದರಿಂದ ಹೆಚ್ಚಿನ ಆಸಕ್ತಿಯಿದೆ. ಹಾಗಾಗಿ ನಮಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ನಾವು ಕ್ರಿಕೆಟ್​ ಆಸ್ಟ್ರೇಲಿಯಾದೊಂದಿಗೆ ಸೀಟ್​ಗಳ ಬಗ್ಗೆ ಚರ್ಚಿಸಿದ್ದೇವೆ. ಈಗಾಗಲೇ ನಿಗದಿಯಾಗಿರುವ 25,000ಕ್ಕಿಂತ ಹೆಚ್ಚಿನ ಅಭಿಮಾನಿಗಳು ಸೇರಬಹುದು ಎಂದು ಒಬೆರಾಯ್ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಮೂರು ಏಕದಿನ ಪಂದ್ಯ ಮತ್ತು 3 ಟಿ-20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಡಿಸೆಂಬರ್ 17ರಂದು ನಡೆಯಲಿರುವ ಪಿಂಕ್​ ಬಾಲ್​ ಟೆಸ್ಟ್​ನಲ್ಲಿ ಮಾತ್ರ ಆಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.