ನವದೆಹಲಿ : ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಕೆ ಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನ ಧೋನಿ ಕೈಯಿಂದ ಕ್ಯಾಪ್ ಪಡೆದಿದ್ದು ತಮ್ಮ ವೃತ್ತಿ ಬದುಕಿನ ಅತ್ಯಂತ ಮರೆಯಲಾಗದ ಕ್ಷಣ ಎಂದು ಹೇಳಿಕೊಂಡಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಮನಯಲ್ಲೇ ಕಾಲ ಕಳೆಯುತ್ತಿರುವ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಮಯ ಕಳೆಯುತ್ತಿದ್ದಾರೆ. ಸೀಮಿತ ಓವರ್ಗಳಲ್ಲಿ ಖಾಯಂ ಆಟಗಾರನಾಗಿರುವ ಕನ್ನಡಿಗ ಕೆ ಎಲ್ ರಾಹುಲ್ ಕೂಡ ಜಿಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವಿನ ವೇಳೆ ಕಳೆಯುತ್ತಿದ್ದು, ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಟ್ವಿಟರ್ನಲ್ಲಿ ಉತ್ತರಿಸಿದ್ದಾರೆ.
ಟ್ವಿಟರ್ ಸೆಸೆನ್ನಲ್ಲಿ ನಿಮ್ಮ ಜೀವನದ ಮರೆಯಲಾಗದ ಕ್ಷಣ ಯಾವುದು ಎಂದು ಕೇಳಿದ್ದಕ್ಕೆ, ಉತ್ತರಿಸಿರುವ ರಾಹುಲ್, 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನ ಅಂದಿನ ನಾಯಕ ಎಂಎಸ್ ಧೋನಿಯಿಂದ ಟೆಸ್ಟ್ ಕ್ಯಾಪ್ ಪಡೆದಿದ್ದು, ನನ್ನ ಪಾಲಿನ ವಿಶೇಷ ದಿನ ಎಂದು ಉತ್ತರಿಸಿದ್ದಾರೆ.
-
It was a special and emotional moment for me. I never thought I would get a chance to play in the series and it was a special feeling to get that cap from MS Dhoni https://t.co/5yirGYh7Q9
— K L Rahul (@klrahul11) May 10, 2020 " class="align-text-top noRightClick twitterSection" data="
">It was a special and emotional moment for me. I never thought I would get a chance to play in the series and it was a special feeling to get that cap from MS Dhoni https://t.co/5yirGYh7Q9
— K L Rahul (@klrahul11) May 10, 2020It was a special and emotional moment for me. I never thought I would get a chance to play in the series and it was a special feeling to get that cap from MS Dhoni https://t.co/5yirGYh7Q9
— K L Rahul (@klrahul11) May 10, 2020
ಇನ್ನು ಇದೇ ವೇಳೆ ದಕ್ಷಿಣ ಆಫ್ರಿಕಾದ ಎಬಿಡಿ ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಎಂದು ತಿಳಿಸಿರುವ ರಾಹುಲ್, ನಿವೃತ್ತಿಯಾಗಿರುವ ಯಾವ ದಿಗ್ಗಜ ಆಟಗಾರರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಬಯಸುತ್ತೀರಾ ಎಂಬುದಕ್ಕೆ ತಾವೂ ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದಾಗಿ ಹೇಳಿದ್ದಾರೆ.
2013-14 ತಮ್ಮ ನೆಚ್ಚಿನ ರಣಜಿ ಸೀಸನ್, 2016 ತಮ್ಮ ನೆಚ್ಚಿನ ಐಪಿಎಲ್ ಆವೃತ್ತಿ, ಹಾಗೆಯೇ ಇಂಗ್ಲೆಂಡ್ನಲ್ಲಿ ಸಿಡಿಸಿದ ಶತಕ ತಮ್ಮ ಅತ್ಯುತ್ತಮ ಶತಕ ಎಂದು ಉತ್ತರಿಸಿದ್ದಾರೆ.