ದುಬೈ: ಪೃಥ್ವಿ ಶಾ, ಸ್ಟೊಯ್ನಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್ಸಿಬಿಗೆ 197 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಸೋತರು ಬ್ಯಾಟಿಂಗ್ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೂ ಅಬ್ಬರದ ಆಟ ಪ್ರದರ್ಶಿಸಿದರು. ಪೃಥ್ವಿ ಶಾ ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರೆ, ಧವನ್ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 32 ರನ್ಗಳಿಸಿದರು. ಈ ಜೊಡಿ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿದರು.
ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಅಯ್ಯರ್ ಕೇವಲ 11 ರನ್ಗಳಿಗೆ ಔಟಾದರು. ಆದೆ 4 ವಿಕೆಟ್ ಜೊತೆಯಾಟದಲ್ಲಿ ಪಂತ್ ಹಾಗೂ ಸ್ಟೋಯ್ನಿಸ್ 89 ರನ್ಗಳ ಜೊತೆಯಾಟ ನೀಡಿದರು. ಪಂತ್ 25 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 37 ರನ್ಗಳಿಸಿದರು. ಸ್ಟೊಯ್ನಿಸ್ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳಿಸಿದರು. ಹೆಟ್ಮೈರ್ 11 ರನ್ಗಳಿಸಿ ಔಟಾಗದೆ ಉಳಿದರು.
-
Innings Break!@DelhiCapitals post a formidable total of 196/4 on the board.
— IndianPremierLeague (@IPL) October 5, 2020 " class="align-text-top noRightClick twitterSection" data="
Will #RCB chase this down? Stay tuned.#Dream11IPL pic.twitter.com/tlCppq0M6D
">Innings Break!@DelhiCapitals post a formidable total of 196/4 on the board.
— IndianPremierLeague (@IPL) October 5, 2020
Will #RCB chase this down? Stay tuned.#Dream11IPL pic.twitter.com/tlCppq0M6DInnings Break!@DelhiCapitals post a formidable total of 196/4 on the board.
— IndianPremierLeague (@IPL) October 5, 2020
Will #RCB chase this down? Stay tuned.#Dream11IPL pic.twitter.com/tlCppq0M6D
ಡೆಲ್ಲಿ ಕ್ಯಾಪಿಟಲ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ರನ್ಗಳಿಸಿತು.
ಆರ್ಸಿಬಿ ಪರ ಮೊಹಮ್ಮದ್ ಸಿರಾರ್ 4 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಉದಾನ ಮತ್ತು ಮೊಯಿನ್ ಅಲಿ 10ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು ತಲಾ ಒಂದು ವಿಕೆಟ್ ಪಡೆದರು. ಆದರೆ ನವದೀಪ್ ಸೈನಿ 3 ಓವರ್ಗಳಲ್ಲಿ 48 ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾದರು.