ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಫ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
![RCB Team jumped 2nd place](https://etvbharatimages.akamaized.net/etvbharat/prod-images/elv4wfkwoais8yw_2810newsroom_1603838418_781.jpg)
ಹೈದರಾಬಾದ್ ತಂಡ ನೀಡಿದ್ದ 220ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಡೆಲ್ಲಿ ತಂಡ 19 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 131ರನ್ಗಳಿಕೆ ಮಾಡಲು ಮಾತ್ರ ಶಕ್ತವಾಯಿತು. ಇದರ ಜತೆಗೆ ಬರೋಬ್ಬರಿ 88ರನ್ಗಳ ಸೋಲು ಕಂಡಿದೆ.
ಡೆಲ್ಲಿ ವಿರುದ್ಧ ಹೈದರಾಬಾದ್ ತಂಡಕ್ಕೆ 88 ರನ್ಗಳ ಭರ್ಜರಿ ಜಯ, ಪ್ಲೇ ಆಫ್ ಆಸೆ ಜೀವಂತ
ಅಂಕಪಟ್ಟಿಯಲ್ಲಿ ಡೆಲ್ಲಿ ಕುಸಿತ
ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಿನ್ನೆಯ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಕಾರಣ ಮೂರನೇ ಸ್ಥಾನಕ್ಕೆ ಕುಸಿತಗೊಂಡಿದೆ. ಜತೆಗೆ ಮೂರನೇ ಸ್ಥಾನದಲ್ಲಿದ್ದ ಆರ್ಸಿಬಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.
![RCB Team jumped 2nd place](https://etvbharatimages.akamaized.net/etvbharat/prod-images/elwvi7duuaapwdb_2810newsroom_1603838418_939.jpg)
ಏರಿಕೆ ಕಂಡ ಆರ್ಸಿಬಿ
ಆರ್ಸಿಬಿ ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು 14 ಪಾಯಿಂಟ್ಗಳಿಕೆ ಮಾಡಿದ್ದು, ಡೆಲ್ಲಿ ಆಡಿರುವ 12 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು 14 ಪಾಯಿಂಟ್ ಹೊಂದಿದೆ. ಆದರೆ ಆರ್ಸಿಬಿ ನೆಟ್ ರನ್ರೇಟ್ +0.092 ಆಗಿದ್ದು, ಡೆಲ್ಲಿ +0.030 ಆಗಿದೆ. ಹೀಗಾಗಿ ಆರ್ಸಿಬಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ನಿನ್ನೆಯ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಕಾರಣ ಡೆಲ್ಲಿ ನೆಟ್ ರನ್ರೇಟ್ನಲ್ಲಿ ಗಮನಾರ್ಹವಾದ ಇಳಿಕೆ ಕಂಡು ಬಂದಿರುವುದೇ ಈ ಬದಲಾವಣೆಗೆ ಕಾರಣವಾಗಿದೆ.