ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡುವ ತವಕದಲ್ಲಿ ಎರಡು ತಂಡ ಮೈದಾನಕ್ಕಿಳಿದಿವೆ.
ಈ ಹಿಂದಿನ ಟೂರ್ನಿಗಳಿಗೆ ಹೋಲಿಕೆ ಮಾಡಿದಾಗ ಈ ಸಲ ಆರ್ಸಿಬಿ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಗೆಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.ಟಾಸ್ ಗೆದ್ದಿರುವ ಸನ್ರೈಸರ್ಸ್ ಹೈದರಾಬಾದ್ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ.
ಉಭಯ ತಂಡ ಆಡುವ 11ರ ಬಳಗ
ಆರ್ಸಿಬಿ ತಂಡ: ಆ್ಯರನ್ ಫಿಂಚ್, ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್,ಪಿಲಿಪ್(ವಿ,ಕೀ),ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ನವದೀಪ್ ಸೈನಿ, ಸ್ಟೇನ್,ಚಹಾಲ್
ಸನ್ರೈಸರ್ಸ್: ವಾರ್ನರ್, ಬ್ಯಾರಿಸ್ಟೋ, ಮನೀಷ್ ಪಾಂಡೆ, ವಿಜಯ್ ಶಂಕರ್, ಮಿಚೆಲ್ ಮಾರ್ಷ್, ಪ್ರೀಯಂ ಗರ್ಗ್,ಅಭಿಷೇಕ್ ಶರ್ಮಾ, ರಾಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ. ನಟರಾಜನ್