ಬೆಂಗಳೂರು: 2019-20ನೇ ಸಾಲಿನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡದ 19 ವರ್ಷದ ಯುವ ಆಟಗಾರ ದೇವದತ್ ಪಡಿಕ್ಕಲ್ ಭವಿಷ್ಯದಲ್ಲಿ ಅತ್ಯುತ್ತಮ ಕ್ರಿಕೆಟಿಗನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
2019ರ ಐಪಿಎಲ್ ಆವೃತ್ತಿಗೆ ನಡೆದ ಹರಾಜಿನಲ್ಲಿ ದೇವದತ್ ಪಡಿಕ್ಕಲ್ರನ್ನು ಆರ್ಸಿಬಿ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು, ಪಡಿಕ್ಕಲ್ ಆಟದಲ್ಲಿ ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ. ಆಕ್ರಮಣಕಾರಿ ಜೊತೆಗೆ ಸಮಯಕ್ಕೆ ತಕ್ಕ ಆಟವನ್ನೂ ಪ್ರದರ್ಶಿಸುವ ಕಲೆಯನ್ನು ಪಡಿಕ್ಕಲ್ ಪಡೆದಿದ್ದಾರೆ.
ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಆಡಿ 4 ಅರ್ಧಶತಕ ಸಹಿತ 310ರನ್ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಇನ್ನು, ಇತ್ತೇಚೆಗೆ ಮುಗಿದ ವಿಜಯ್ ಹಜಾರೆ ಟ್ರೋಫಿಯಲ್ಲೂ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ನಡೆಸಿ 1 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ ಆಗಿದ್ದರು.
ಆರ್ಸಿಬಿ ತಂಡದಲ್ಲಿರುವ ಪಡಿಕ್ಕಲ್ ಅವರನ್ನು ಆರ್ಸಿಬಿ ಡಿಸೆಂಬರ್ನಲ್ಲಿ ನಡೆಯುವ ಹರಾಜಿನಲ್ಲಿ ರೀಟೈನ್ ಮಾಡಿಕೊಂಡು, ಆರಂಭಿಕನಾಗಿ ಕಣಕ್ಕಿಳಿಸಿದರೆ ಖಂಡಿತ ಆರ್ಸಿಬಿಗೆ ಗೇಲ್ನಂತರ ಕಾಡುತ್ತಿರುವ ಆರಂಭಿಕನ ಸ್ಥಾನವನ್ನು 19 ವರ್ಷದ ಯುವ ಬ್ಯಾಟ್ಸ್ಮನ್ ತುಂಬಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.