ETV Bharat / sports

ಆರ್​ಸಿಬಿ ಈ ಬಾರಿಯ ಐಪಿಎಲ್​ ಗೆಲ್ಲುವ ನೆಚ್ಚಿನ ತಂಡ - ಬ್ರಾಡ್​ ಹಾಗ್​

ಆರ್​ಸಿಬಿ ಬಿಟ್ಟರೆ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ಗೂ ಹೆಚ್ಚಿನ ಅವಕಾಶವಿದೆ ಎಂದು ಹಾಗ್​ ಅಭಿಪ್ರಾಯಪಟ್ಟಿದ್ದಾರೆ. ಆ ತಂಡದಲ್ಲಿ ಮೊದಲ ನಾಲ್ಕು ಬ್ಯಾಟ್ಸ್​ಮನ್​ಗಳು ಉತ್ತಮವಾಗಿದ್ದಾರೆ..

RCB chance to win IPL20202
RCB chance to win IPL20202
author img

By

Published : Jul 26, 2020, 6:18 PM IST

ನವದೆಹಲಿ : ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ತಂಡ 13ನೇ ಆವೃತ್ತಿಯ ಐಪಿಎಲ್​ ಎತ್ತಿ ಹಿಡಿಯುವ ನೆಚ್ಚಿನ ತಂಡ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್​ ಬ್ರಾಡ್​ ಹಾಗ್​ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್​ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಶುಕ್ರವಾರ ಸೆಪ್ಟೆಂಬರ್​ 19ರಿಂದ ನವೆಂಬರ್​ 8ರವರೆಗೆ 13ನೇ ಆವೃತ್ತಿಯ ಐಪಿಎಲ್​ ಯುಎಇನಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ. ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದ ವೇಳೆ ಅವರ ಪ್ರಶ್ನೆಗೆ ಹಾಗ್ ಉತ್ತರಿಸುತ್ತಾ ಈ ಬಾರಿ ಐಪಿಎಲ್​ ಟ್ರೋಫಿಯನ್ನು ವಿರಾಟ್ ಕೊಹ್ಲಿ ಬಳi ಎತ್ತಿಹಿಡಿಯಲಿದೆ ಎಂದಿದ್ದಾರೆ.

"ಅವರಿಗೆ(ಆರ್​ಸಿಬಿ) ಐಪಿಎಲ್​ ಟ್ರೋಪಿ ಗೆಲ್ಲುವ ಹೆಚ್ಚಿನ ಅವಕಾಶವಿದೆ. ಅವರು ಪೇಪರ್​ನಲ್ಲಿ ಸದಾ ಉತ್ತಮ ತಂಡವನ್ನು ಹೊಂದಿರುತ್ತಾರೆ. ಆದರೆ, ಅದನ್ನು ಗೆಲುವಾಗಿ ಹೊರ ತರಲು ವಿಫಲರಾಗುತ್ತಿದ್ದಾರೆ " ಎಂದಿದ್ದಾರೆ.

Brad hogg
ಬ್ರಾಡ್​ ಹಾಗ್​

ಆದರೆ, ಈ ಬಾರಿ ಆರ್​ಸಿಬಿ ಆ್ಯರೋನ್​ ಫಿಂಚ್​ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅವರು ಪವರ್​ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್​ ಆಡುವ ಸಾಮರ್ಥ್ಯವಿದ್ದು, ವಿರಾಟ್​ ಮತ್ತು ಎಬಿಡಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದ್ದಾರೆ ಎಂದು ಹಾಗ್​ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು, ಆರ್​ಸಿಬಿ ಬೌಲಿಂಗ್​ ದಾಳಿ ಕೂಡ ಈ ಬಾರಿ ಪ್ರಬಲವಾಗಿದೆ. ಡೇಲ್​ ಸ್ಟೈನ್​, ಕೇನ್​ ರಿಚರ್ಡ್ಸನ್​ ತಂಡ ಸೇರಿಕೊಳ್ಳುವುದರಿಂದ ತಂಡ ಸಮತೋಲನ ಕಾಪಾಡಿಕೊಳ್ಳಲಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದ್ರೆ ತಂಡ ಬಲಿಷ್ಠವಾಗಲಿದೆ. ಅವರು ಟೂರ್ನಾಮೆಂಟ್​ನಲ್ಲಿ ಉತ್ತಮ ಯೋಜನೆಗಳೊಂದಿಗೆ ಹೋಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.​

ಆರ್​ಸಿಬಿ ಬಿಟ್ಟರೆ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ಗೂ ಹೆಚ್ಚಿನ ಅವಕಾಶವಿದೆ ಎಂದು ಹಾಗ್​ ಅಭಿಪ್ರಾಯಪಟ್ಟಿದ್ದಾರೆ. ಆ ತಂಡದಲ್ಲಿ ಮೊದಲ ನಾಲ್ಕು ಬ್ಯಾಟ್ಸ್​ಮನ್​ಗಳು ಉತ್ತಮವಾಗಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಆಲ್​ರೌಂಡರ್ ಆಟ ಹಾಗೂ ಬುಮ್ರಾ ಮತ್ತು ಮಲಿಂಗಾ ಜೋಡಿಯ ವೇಗದ ಬೌಲಿಂಗ್​ ಮುಂಬೈ ಇಂಡಿಯನ್ಸ್​ಗೆ ಬಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.