ಅಬುಧಾಬಿ : ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಶೆಲ್ಡಾನ್ ಕಾಟ್ರೆಲ್ ಬೌಲಿಂಗ್ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ದಿಢೀರ್ ಸ್ಟಾರ್ ಆಗಿ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾಗೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶನಿವಾರ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ 154 ರನ್ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಬೆಂಗಳೂರ ತಂಡ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತ್ತು. ನಾಯಕ ಕೊಹ್ಲಿ 72 ರನ್ಗಳಿಸಿದ್ರೆ, ಯುವ ಆಟಗಾರ ದೇವದತ್ ಪಡಿಕ್ಕಲ್ 63 ರನ್ಗಳಿಸಿ ತಂಡಕ್ಕೆ 8 ವಿಕೆಟ್‌ಗಳಿಂದ ಗೆಲುವು ತಂದುಕೊಟ್ಟಿದ್ದರು.
-
A special autographed jersey from Virat Kohli to Rahul Tewatia 🖋️
— ICC (@ICC) October 3, 2020 " class="align-text-top noRightClick twitterSection" data="
Game recognises game 🏏 #IPL2020 pic.twitter.com/t9O5XlhCuj
">A special autographed jersey from Virat Kohli to Rahul Tewatia 🖋️
— ICC (@ICC) October 3, 2020
Game recognises game 🏏 #IPL2020 pic.twitter.com/t9O5XlhCujA special autographed jersey from Virat Kohli to Rahul Tewatia 🖋️
— ICC (@ICC) October 3, 2020
Game recognises game 🏏 #IPL2020 pic.twitter.com/t9O5XlhCuj
ಪಂದ್ಯದಲ್ಲಿ ಸೋಲನುಭವಿಸಿದ್ದರು, ಕೇವಲ 12 ಎಸೆತಗಳಲ್ಲಿ 24 ರನ್ ಸಿಡಿಸಿ ಮಿಂಚಿದ್ದ ರಾಹುಲ್ ತೆವಾಟಿಯಾ ಆರ್ಸಿಬಿ ನಾಯಕ ಕೊಹ್ಲಿಯಿಂದ ಜರ್ಸಿಯನ್ನು ಉಡುಗೊರೆಯಾಗಿ ಪಡೆದರು.
'ಪಂದ್ಯಕ್ಕೂ ಮುನ್ನ ನಾನು ಕೊಹ್ಲಿಯನ್ನು ಜರ್ಸಿ ನೀಡುವಂತೆ ಕೇಳಿದೆ. ಅವರು ಪಂದ್ಯ ಮುಗಿದ ನಂತರ ಅವರ ಸಹಿಯಿರುವ ಜರ್ಸಿಯನ್ನು ನನಗೆ ಉಡುಗೊರೆಯಾಗಿ ನೀಡಿದರು. ಅವರು ಸಾಕಷ್ಟು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬ. ಅವರು ಲೆಜೆಂಡ್, ಅವರಿಂದ ಜೆರ್ಸಿ ಪಡೆದಿರುವುದು ನನಗೆ ವಿಶೇಷ' ಎಂದು ತೆವಾಟಿಯಾ ಆರ್ಆರ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ತೆವಾಟಿಯಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ 53 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.