ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 14ನೇ ಆವೃತ್ತಿಯ ಐಪಿಎಲ್ಗಾಗಿ ಗುರುವಾರ ಚೆನ್ನೈ ತಲುಪಿದ್ದು, 7 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ಇಂದು ಬೆಳಿಗ್ಗೆ ಚೆನ್ನೈಗೆ ಬಂದಿಳಿದಿದ್ದರು. ಮಧ್ಯಾಹ್ನ ವಿರಾಟ್ ಕೊಹ್ಲಿ ಕೂಡ ನಗರಕ್ಕೆ ಆಗಮಿಸಿದ್ದಾರೆ.
-
If you thought we were done breaking the internet for the day, think again! 😎
— Royal Challengers Bangalore (@RCBTweets) April 1, 2021 " class="align-text-top noRightClick twitterSection" data="
Captain Virat Kohli 👑 has arrived in Chennai 🤩#PlayBold #WeAreChallengers #IPL2021 pic.twitter.com/p1BS81eChE
">If you thought we were done breaking the internet for the day, think again! 😎
— Royal Challengers Bangalore (@RCBTweets) April 1, 2021
Captain Virat Kohli 👑 has arrived in Chennai 🤩#PlayBold #WeAreChallengers #IPL2021 pic.twitter.com/p1BS81eChEIf you thought we were done breaking the internet for the day, think again! 😎
— Royal Challengers Bangalore (@RCBTweets) April 1, 2021
Captain Virat Kohli 👑 has arrived in Chennai 🤩#PlayBold #WeAreChallengers #IPL2021 pic.twitter.com/p1BS81eChE
ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದ ನಂತರ ಬಯೋಬಬಲ್ನಿಂದ ಹೊರ ಹೋಗಿದ್ದರಿಂದ ಬಿಸಿಸಿಐ ಪ್ರೋಟೋಕಾಲ್ ಪ್ರಕಾರ 7 ದಿನಗಳ ಕಾಲ ಹೋಟೆಲ್ನಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಿದೆ. ನಂತರ ತಂಡ ಸೇರಿಕೊಳ್ಳಬಹುದು. ಇಂದಿನಿಂದ ಕ್ವಾರಂಟೈನ್ ಆರಂಭಿಸುವ ಕೊಹ್ಲಿ, ಏಪ್ರಿಲ್ 7 ಅಥವಾ 8ರಂದು ತಂಡದ ಜೊತೆಗೆ ಅಭ್ಯಾಸ ಮಾಡಲಿದ್ದಾರೆ.
ಇದೇ ವರ್ಷ ಆರ್‌ಸಿಬಿ ಸೇರಿರುವ ಗ್ಲೇನ್ ಮ್ಯಾಕ್ಸ್ವೆಲ್, ಡೇನಿಯಲ್ ಕ್ರಿಸ್ಚಿಯನ್ ಈಗಾಗಲೇ ಆಸ್ಟ್ರೇಲಿಯಾದ ಫ್ಲೈಟ್ ಏರಿದ್ದಾರೆ. ಕಿವೀಸ್ನ ಕೈಲ್ ಜೆಮೀಸನ್ ಮತ್ತು ಫಿನ್ ಅಲೆನ್ ಕೂಡ ನಾಳೆ ಚೆನ್ನೈಗೆ ಬರಲಿದ್ದಾರೆ.
ಕೋಚ್ ಸೈಮನ್ ಕ್ಯಾಟಿಚ್ ಮತ್ತು ನವದೀಪ್ ಸೈನಿ ಕ್ವಾರಂಟೈನ್ ಮುಗಿಸಿ ಇಂದು ತರಬೇತಿ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಚೆನ್ನೈನಲ್ಲಿ RCB ಕ್ಯಾಂಪ್ ಸೇರಿಕೊಂಡ ಎಬಿಡಿ