ಹೈದರಾಬಾದ್: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ದುಬೈನಲ್ಲಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಕೆಲವೊಂದು ತಂಡಗಳು ಅಲ್ಲಿಗೆ ತೆರಳಿವೆ. ಇಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್ಕೆ ಹಾಗೂ ಕೊಹ್ಲಿ ಸಾರಥ್ಯದ ಆರ್ಸಿಬಿ ತಂಡ ಪ್ರವಾಸ ಬೆಳೆಸಿದವು.
ಮಹೇಂದ್ರ ಸಿಂಗ್ ಧೋನಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಅನೇಕ ಪ್ಲೇಯರ್ಸ್ ಪ್ರಯಾಣ ಬೆಳೆಸಿದರು. ಕಳೆದ ಆಗಸ್ಟ್ 15ರಂದು ಧೋನಿ ಹಾಗೂ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಣೆ ಮಾಡಿದ್ದು, ಇದೀಗ ಐಪಿಎಲ್ನಲ್ಲಿ ಭಾಗಿಯಾಗಲಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಇಂದು ದುಬೈಗೆ ಪ್ರಯಾಣ ಬೆಳೆಸಿತು. ಸ್ಪಿನ್ನರ್ ಯಜುವೇಂದ್ರ ಚಹಾಲ್, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ವೇಗದ ಬೌಲರ್ ಉಮೇಶ್ ಯಾದವ್ ಹಾಗೂ ನವದೀಪ್ ಸೈನಿ ಸೇರಿದಂತೆ ಅನೇಕ ಪ್ಲೇಯರ್ಸ್ ಸಾಥ್ ನೀಡಿದ್ದಾರೆ. ಆದರೆ ಇವರೊಂದಿಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರಯಾಣ ಬೆಳೆಸಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
-
Guess who joined the party! There is no escape from 👨🏻👀 #PlayBold #TravelDay #IPL2020 #Peas pic.twitter.com/DoeA03DNLV
— Royal Challengers Bangalore (@RCBTweets) August 21, 2020 " class="align-text-top noRightClick twitterSection" data="
">Guess who joined the party! There is no escape from 👨🏻👀 #PlayBold #TravelDay #IPL2020 #Peas pic.twitter.com/DoeA03DNLV
— Royal Challengers Bangalore (@RCBTweets) August 21, 2020Guess who joined the party! There is no escape from 👨🏻👀 #PlayBold #TravelDay #IPL2020 #Peas pic.twitter.com/DoeA03DNLV
— Royal Challengers Bangalore (@RCBTweets) August 21, 2020
ನಿನ್ನೆ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿನ್ನೆ ಪ್ರಯಾಣ ಬೆಳೆಸಿದ್ದವು. ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ.