ETV Bharat / sports

ಟೆಸ್ಟ್​ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ... ಮೊದಲೆರಡು ಟೆಸ್ಟ್​ಗೆ ಜಡೇಜಾ ಅಲಭ್ಯ?

author img

By

Published : Dec 7, 2020, 7:10 PM IST

ಪ್ರಸ್ತುತ ಗಾಯಾಳು ರವೀಂದ್ರ ಜಡೇಜಾರಿಗೆ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿದು ಬಂದಿದೆ. 32 ವರ್ಷದ ಜಡೇಜಾ ಅನಿವಾರ್ಯವಾಗಿ ತಮ್ಮ 50ನೇ ಟೆಸ್ಟ್​ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಡಿಸೆಂಬರ್​ 17ರಿಂದ ಅಡಿಲೇಡ್​ನಲ್ಲಿ ಡೇ ಅಂಡ್ ನೈಟ್ ಟೆಸ್ಟ್​ ಪಂದ್ಯ ಆರಂಭವಾಗಲಿದೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಮತ್ತು ಮೊದಲ ಟಿ-20 ಪಂದ್ಯ ಗೆಲ್ಲಲು ನೆರವಾಗಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಕನ್ಕಶನ್ ಮತ್ತು ಹ್ಯಾಮ್​ಸ್ಟ್ರಿಂಗ್​ನಿಂದ ಬಳಲುತ್ತಿದ್ದು, ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಈಗಾಗಲೇ ಕೊಹ್ಲಿ ಕೇವಲ ಒಂದು ಟೆಸ್ಟ್​ ಮಾತ್ರ ಆಡಲಿದ್ದಾರೆ ಎನ್ನುವುದು ಖಾತ್ರಿಯಾಗಿದೆ. ರೋಹಿತ್​ ಶರ್ಮಾ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಹೀಗಿರುವಾಗ ಸ್ಟಾರ್​ ಆಲ್​ರೌಂಡರ್​ ಜಡೇಜಾ ಗಾಯಕ್ಕೀಡಾಗಿರುವುದು ಟೀಮ್​ ಇಂಡಿಯಾಗೆ ದೊಡ್ಡ ಆಘಾತ ತಂದಿದೆ.

ಪ್ರಸ್ತುತ ಗಾಯಾಳು ರವೀಂದ್ರ ಜಡೇಜಾರಿಗೆ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿದು ಬಂದಿದೆ. 32 ವರ್ಷದ ಜಡೇಜಾ ಅನಿವಾರ್ಯವಾಗಿ ತಮ್ಮ 50ನೇ ಟೆಸ್ಟ್​ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಡಿಸೆಂಬರ್​ 17ರಿಂದ ಅಡಿಲೇಡ್​ನಲ್ಲಿ ಡೇ ಅಂಡ್ ನೈಟ್ ಟೆಸ್ಟ್​ ಪಂದ್ಯ ಆರಂಭವಾಗಲಿದೆ.

"ಐಸಿಸಿಯ ಕನ್ಕಶನ್ ಪ್ರೋಟೋಕಾಲ್ ಪ್ರಕಾರ ಆಟಗಾರನ ತಲೆಗೆ ಗಾಯವಾದರೆ ಆತ 7-10 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿರುತ್ತದೆ. ಹೀಗಾಗಿ ಎಸ್​ಸಿಜಿಯಲ್ಲಿ ಡಿಸೆಂಬರ್ 11ರಿಂದ ಆರಂಭವಾಗುವ ಮೂರು ದಿನಗಳ ಡೇ-ನೈಟ್ ಅಭ್ಯಾಸ ಪಂದ್ಯಕ್ಕೂ ಜಡೇಜಾ ಅಲಭ್ಯರಾಗಲಿದ್ದಾರೆ" ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಅಭ್ಯಾಸ ಪಂದ್ಯವನ್ನಾಡದೆ ಟೆಸ್ಟ್​ ಪಂದ್ಯದಲ್ಲಿ ಜಡೇಜಾಗೆ ಅವಕಾಶ ಸಿಗುವುದು ಕೂಡ ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಕನ್ಕಶನ್‌ ಹೊರೆತಾಗಿಯೂ ಜಡೇಜಾ ಹ್ಯಾಮ್​ಸ್ಟ್ರಿಂಗ್​ನಿಂದ ಬಳಲುತ್ತಿರುವುದರಿಂದ ಎರಡು ಪಂದ್ಯವಲ್ಲದಿದ್ದರೂ ಒಂದು ಪಂದ್ಯದಿಂದ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಮೊದಲ ಅಭ್ಯಾಸ ಪಂದ್ಯದ ವೇಳೆ ಜಡೇಜಾರಿಗೆ ವೈದ್ಯರು 3 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದರು.

ವಿದೇಶಿ ಪಿಚ್​ಗಳಲ್ಲಿ ಆಡುವಾಗ ಜಡೇಜಾ ತಂಡದ ಕಾಯಂ ಸದಸ್ಯರಾಗಿದ್ದರು. ಇದೀಗ ಅವರ ಅನುಪಸ್ಥಿತಿಯಲ್ಲಿ ಅಶ್ವಿನ್ ಏಕಮಾತ್ರ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಜಡೇಜಾ ಭಾರತ ತಂಡದ ಪರ 49 ಟೆಸ್ಟ್​ ಪಂದ್ಯಗಳನ್ನಾಡಿದ್ದು, 213 ವಿಕೆಟ್ ಪಡೆದಿದ್ದಾರೆ. ಜೊತೆಗೆ ಒಂದು ಶತಕ ಹಾಗೂ 14 ಅರ್ಧಶತಕಗಳ ಸಹಿತ 1869 ರನ್ ​ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.