ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು 5 ವಿಕೆಟ್​: ಇಯಾನ್ ಬಾಥಮ್​ ದಾಖಲೆ ಬ್ರೇಕ್​ ಮಾಡಿದ ಆರ್​.ಅಶ್ವಿನ್

author img

By

Published : Feb 8, 2021, 7:50 PM IST

ಇಂಗ್ಲೆಂಡ್ 2ನೇ ಇನ್ನಿಂಗ್ಸ್​ ಬ್ಯಾಟಿಂಗ್​ ಆರಂಭಿಸುತ್ತಿದ್ದಂತೆ ರೋರಿ ಬರ್ನ್ಸ್​ರನ್ನು ಮೊದಲ ಎಸೆತದಲ್ಲೇ ಔಟ್ ಮಾಡುವ ಮೂಲಕ, ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ 100 ವರ್ಷಗಳ ನಂತರ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಸ್ಪಿನ್​ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. 1907ರಲ್ಲಿ ಬರ್ಟ್​ ವೋಲ್ಗರ್​ ಈ ಸಾಧನೆ ಮಾಡಿದ್ದರು.

ರವಿಚಂದ್ರನ್ ಅಶ್ವಿನ್​ ದಾಖಲೆ
ರವಿಚಂದ್ರನ್ ಅಶ್ವಿನ್​ ದಾಖಲೆ

ಚೆನ್ನೈ: ಇಂಗ್ಲೆಂಡ್ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆಯುವ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್ 2ನೇ ಇನ್ನಿಂಗ್ಸ್​ ಬ್ಯಾಟಿಂಗ್​ ಆರಂಭಿಸುತ್ತಿದ್ದಂತೆ ರೋರಿ ಬರ್ನ್ಸ್​ರನ್ನು ಮೊದಲ ಎಸೆತದಲ್ಲೇ ಔಟ್ ಮಾಡುವ ಮೂಲಕ, ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ 100ವರ್ಷಗಳ ನಂತರ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಸ್ಪಿನ್​ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು. 1907ರಲ್ಲಿ ಬರ್ಟ್​ ವೋಲ್ಗರ್​ ಈ ಸಾಧನೆ ಮಾಡಿದ್ದರು.

ಇದಲ್ಲದೇ ಇಂಗ್ಲೆಂಡ್​ ತಂಡವನ್ನು 178ರನ್​ಗಳಿಗೆ ಕಟ್ಟಿಹಾಕುವಲ್ಲಿ ಅಶ್ವಿನ್ ನೆರವಾಗಿದ್ದರು. ಅವರು ಎರಡನೇ ಇನ್ನಿಂಗ್ಸ್​ನಲ್ಲಿ 61 ರನ್​ ನೀಡಿ 6 ವಿಕೆಟ್ ಪಡೆದರು. ಈ ಮೂಲಕ ವೃತ್ತಿ ಜೀವನದಲ್ಲಿ 28ನೇ ಬಾರಿ 5 ವಿಕೆಟ್ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡಿನ ಮಾಜಿ ಆಲ್ ರೌಂಡರ್ ಇಯಾನ್ ಬಾಥಮ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು 5 ವಿಕೆಟ್ ಪಡೆದ ಬೌಲರ್ಸ್​

  • ಮುತ್ತಯ್ಯ ಮುರಳಿಧರನ್ : 67
  • ಶೇನ್ ವಾರ್ನ್ : 37
  • ಸರ್ ರಿಚರ್ಡ್ ಹ್ಯಾಡ್ಲಿ : 36
  • ಅನಿಲ್ ಕುಂಬ್ಳೆ : 35
  • ರಂಗನಾ ಹೆರಾತ್ : 34
  • ಜೇಮ್ಸ್ ಆಂಡರ್ಸನ್ : 30
  • ಗ್ಲೆನ್ ಮೆಗ್ರಾ : 29
  • ಆರ್ ಅಶ್ವಿನ್ : 28
  • ಇಯಾನ್ ಬಾಥಮ್ : 27

ಟೆಸ್ಟ್​ ಕ್ರಿಕೆಟ್​ನಲ್ಲಿ ತವರಿನಲ್ಲಿ ಹೆಚ್ಚು 5 ವಿಕೆಟ್​ ಪಡೆದ ಬೌಲರ್ಸ್​

  • ಮುತ್ತಯ್ಯ ಮುರುಳೀದರನ್​-45
  • ರಂಗಬಾ ಹೆರಾತ್​-26
  • ಅನಿಲ್ ಕುಂಬ್ಳೆ-25
  • ಜೇಮ್ಸ್​ ಆ್ಯಂಡರ್ಸನ್​- 22
  • ರವಿಚಂದ್ರನ್ ಅಶ್ವಿನ್- 22

ETV Bharat Logo

Copyright © 2024 Ushodaya Enterprises Pvt. Ltd., All Rights Reserved.