ಇಂದೋರ್: ಭಾರತದ ಹಿರಿಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ ವಿಕೆಟ್ ಪಡೆಯುತ್ತಿದ್ದಂತೆ ಅಶ್ವಿನ್ ಭಾರತದಲ್ಲಿ 250 ವಿಕೆಟ್ ಪೂರ್ಣಗೊಳಿಸಿದರು. ಅಲ್ಲದೆ ವೇಗವಾಗಿ ಈ ಸಾಧನೆ ಮಾಡಿದ ದಾಖಲೆಯನ್ನು ಮುತ್ತಯ್ಯ ಮುರುಳೀದರನ್ ಜೊತೆ ಹಂಚಿಕೊಂಡರು.
-
250 Test wickets at home for @ashwinravi99. He becomes the third Indian bowler to do so after @anilkumble1074 & @harbhajan_singh. pic.twitter.com/x1Q6fTonsi
— BCCI (@BCCI) November 14, 2019 " class="align-text-top noRightClick twitterSection" data="
">250 Test wickets at home for @ashwinravi99. He becomes the third Indian bowler to do so after @anilkumble1074 & @harbhajan_singh. pic.twitter.com/x1Q6fTonsi
— BCCI (@BCCI) November 14, 2019250 Test wickets at home for @ashwinravi99. He becomes the third Indian bowler to do so after @anilkumble1074 & @harbhajan_singh. pic.twitter.com/x1Q6fTonsi
— BCCI (@BCCI) November 14, 2019
ಮುತ್ತಯ್ಯ ಮುರುಳೀದರನ್ ತವರಿನಲ್ಲಿ 250 ವಿಕೆಟ್ ಪಡೆಯಲು 42 ಪಂದ್ಯಗಳನ್ನಾಡಿದ್ದರು. ಆಶ್ವಿನ್ ಸಹ ಅಷ್ಟೇ ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ. ಇನ್ನು, ಕನ್ನಡಿಗ ಅನಿಲ್ ಕುಂಬ್ಳೆ ಹಾಗೂ ಲಂಕಾದ ಮತ್ತೋರ್ವ ಸ್ಪಿನ್ನರ್ ರಂಗನ ಹೆರಾತ್ ಕೂಡ 43 ಪಂದ್ಯ ತೆಗೆದುಕೊಂಡಿದ್ದಾರೆ. ಅಲ್ಲದೆ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ನಂತರ ತವರಿನಲ್ಲಿ 250 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದರು.
ಒಟ್ಟಾರೆ ಅಶ್ವಿನ್ 69 ಟೆಸ್ಟ್ ಪಂದ್ಯಗಳಲ್ಲಿ 359 ವಿಕೆಟ್ ಪಡೆದಿದ್ದಾರೆ. 27 ಬಾರಿ 5 ವಿಕೆಟ್, 7 ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದರಲ್ಲಿ ಪಂದ್ಯವೊಂದರಲ್ಲಿ 140 ರನ್ ನೀಡಿದ 13 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ.