ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಎಬಿ ಡಿವಿಲಿಯರ್ಸ್ ಆರ್ಭಟ ಜೋರಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮಿ.360 ಎದುರಾಳಿ ಬೌಲರ್ಗಳನ್ನ ಬೆಂಡೆತ್ತಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಫಿಂಚ್ ವಿಕೆಟ್ ಬೀಳುತ್ತಿದ್ದಂತೆ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಕೇವಲ 33 ಎಸೆತಗಳಲ್ಲಿ 73 ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದಿದ್ದಾರೆ. ಇದರಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿ ಸೇರಿದ್ದವು. ಇವರ ಆಟಕ್ಕೆ ಮನಸೋತಿರುವ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ದಕ್ಷಿಣ ಆಫ್ರಿಕಾ ಮಾಜಿ ಆಟಗಾರನ ಬಳಿ ವಿಶೇಷ ಮನವಿ ಮಾಡಿದ್ದಾರೆ.
-
Now, that the penny has dropped. What one saw last night was unreal. And the feeling is the same waking up. @ABdeVilliers17, the game in these trying times or otherwise needs you back in the international arena and out of retirement. The game will be better off #RCBvKKR #IPL2020 pic.twitter.com/s9BG6MxiCv
— Ravi Shastri (@RaviShastriOfc) October 13, 2020 " class="align-text-top noRightClick twitterSection" data="
">Now, that the penny has dropped. What one saw last night was unreal. And the feeling is the same waking up. @ABdeVilliers17, the game in these trying times or otherwise needs you back in the international arena and out of retirement. The game will be better off #RCBvKKR #IPL2020 pic.twitter.com/s9BG6MxiCv
— Ravi Shastri (@RaviShastriOfc) October 13, 2020Now, that the penny has dropped. What one saw last night was unreal. And the feeling is the same waking up. @ABdeVilliers17, the game in these trying times or otherwise needs you back in the international arena and out of retirement. The game will be better off #RCBvKKR #IPL2020 pic.twitter.com/s9BG6MxiCv
— Ravi Shastri (@RaviShastriOfc) October 13, 2020
ನಿನ್ನೆ ರಾತ್ರಿ ಎಬಿಡಿ ಆರ್ಭಟ ನಿಜಕ್ಕೂ ಅದ್ಭುತವಾಗಿತ್ತು. ನೀವು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನೀಡಿರುವ ನಿವೃತ್ತಿ ವಾಪಸ್ ಪಡೆದು ಮತ್ತೆ ತಂಡಕ್ಕೆ ಬರಬೇಕು ಎಂದು ಟ್ವೀಟ್ ಮಾಡಿದ್ದಾರೆ. 2018ರ ಮೇ ತಿಂಗಳಲ್ಲಿ ಎಬಿ ಡಿವಿಲಿಯರ್ಸ್ ಮೇ ತಿಂಗಳ 2018ರಲ್ಲಿ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳುತ್ತಿದ್ದಂತೆ ಎಲ್ಲರೂ ಶಾಕ್ಗೆ ಒಳಗಾಗಿದ್ದರು. ಇದಾದ ಬಳಿಕ ಅನೇಕರು ನಿವೃತ್ತಿ ವಾಪಸ್ ಪಡೆದು ತಂಡಕ್ಕೆ ಮರಳಬೇಕು ಎಂದು ಮನವಿ ಮಾಡಿಕೊಂಡಿದ್ದರು.