ಬ್ಲೂಮ್‌ಫಾಂಟೈನ್: ಭಾರತ ಯುವ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಕ್ರಿಕೆಟ್ ಶಿಶು ಜಪಾನ್ ಕೇವಲ 41 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
5 ನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ಯುವಪಡೆ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 90 ರನ್ಗಳಿಂದ ಗೆದ್ದು ಬೀಗಿತ್ತು. ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ ಕೇವಲ 22.5 ಓವರ್ಗಳಲ್ಲಿ ಜಪಾನ್ ತಂಡವನ್ನು 41 ರನ್ಗಳಿಗೆ ಆಲೌಟ್ ಮಾಡಿದೆ.
-
Ravi Bishnoi scalps four while Kartik Tyagi picks up three wickets as India U19 bowl out Japan U19 for 41.
— BCCI (@BCCI) January 21, 2020 " class="align-text-top noRightClick twitterSection" data="
Indian chase to begin shortly.
Follow it live 👇👇 https://t.co/evkdeCz0en#INDvJPN #U19CWC pic.twitter.com/CgjN7kzjdt
">Ravi Bishnoi scalps four while Kartik Tyagi picks up three wickets as India U19 bowl out Japan U19 for 41.
— BCCI (@BCCI) January 21, 2020
Indian chase to begin shortly.
Follow it live 👇👇 https://t.co/evkdeCz0en#INDvJPN #U19CWC pic.twitter.com/CgjN7kzjdtRavi Bishnoi scalps four while Kartik Tyagi picks up three wickets as India U19 bowl out Japan U19 for 41.
— BCCI (@BCCI) January 21, 2020
Indian chase to begin shortly.
Follow it live 👇👇 https://t.co/evkdeCz0en#INDvJPN #U19CWC pic.twitter.com/CgjN7kzjdt
ಭಾರತದ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ರವಿ ಬಿಶ್ನೋಯ್ 8 ಓವರ್ಗಳಲ್ಲಿ 3 ಮೇಡನ್ ಮಾಡಿ ಕೇವಲ 5 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಕಾರ್ತಿಕ್ ತ್ಯಾಗಿ 6 ಓವರ್ಗಳಲ್ಲಿ 10 ರನ್ ನೀಡಿ 3 ವಿಕೆಟ್, ಆಕಾಶ್ ಸಿಂಗ್ 4.5 ಓವರ್ಗಳಲ್ಲಿ 11 ರನ್ ನೀಡಿ 2 ವಿಕೆಟ್, ವಿದ್ಯಾದರ್ ಪಾಟೀಲ್ 4 ಓವರ್ಗಳಲ್ಲಿ ಒಂದು ಮೇಡನ್ ಸಹಿತ 8 ರನ್ ನೀಡಿ 1 ವಿಕೆಟ್ ಪಡೆದರು.
ಜಪಾನ್ ಪರ ಆರಂಭಿಕ ಶು ನಗುಚಿ 7 ರನ್, ಕೆಂಟೊ ಒಟ ಡೊಬೆಲ್ 7 ರನ್ಗಳಿಸಿದ್ದೇ ಗರಿಷ್ಠ ರನ್. ಆಶ್ಚರ್ಯವೆಂದರೆ ಜಪಾನ್ಗಳಿಸಿದ 41 ರನ್ಗಳಲ್ಲಿ 19 ರನ್ ಭಾರತದ ಬೌಲರ್ಗಳು ನೀಡಿದ ಇತರೆ ರನ್ಗಳ ಮೂಲಕ ಬಂದಿದೆ.
ಜಪಾನ್ ಕೇವಲ 41 ರನ್ಗಳಿಗೆ ಆಲೌಟ್ ಆಗುವ ಮೂಲಕ ಅಂಡರ್ 19 ವಿಶ್ವಕಪ್ನಲ್ಲಿ 2ನೇ ಕನಿಷ್ಠ ಮೊತ್ತ, ಹಾಗೂ ಅಂಡರ್ 19 ಕ್ರಿಕೆಟ್ನಲ್ಲಿ 3ನೇ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಬೇಡದ ದಾಖಲೆಗೆ ತುತ್ತಾಯಿತು.