ETV Bharat / sports

ಟಿ-20 ಕ್ರಿಕೆಟ್​ನಲ್ಲಿ ವೇಗವಾಗಿ 300 ವಿಕೆಟ್​ ಪಡೆದ ರಶೀದ್​​ ಖಾನ್​​​ - ಸಿಪಿಎಲ್​ 2020

ಶುಕ್ರವಾರ ನಡೆದ ಪಂದ್ಯದಲ್ಲಿ ರಶೀದ್​ ಲೂಸಿಯಾ ಜೌಕ್ಸ್​ ತಂಡದ ಮೊಹಮ್ಮದ್​ ನಬಿ ಅವರ ವಿಕೆಟ್​ ಪಡೆಯುವ ಮೂಲಕ ಟಿ-20ಯಲ್ಲಿ 300 ವಿಕೆಟ್​ ಪೂರ್ಣಗೊಳಿಸಿದರು. ಇವರು ಈ ಸಾಧನೆಗಾಗಿ 213 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.

ರಶೀದ್​ ಖಾನ್
ರಶೀದ್​ ಖಾನ್
author img

By

Published : Aug 22, 2020, 2:14 PM IST

ಟ್ರಿನಿಡಾಡ್​: ವಿಶ್ವದ ಅತ್ಯುತ್ತಮ ಬೌಲರ್​ಗಳಲ್ಲಿ ಒಬ್ಬರಾಗಿರುವ ಅಫ್ಘಾನಿಸ್ತಾನದ ರಶೀದ್​ ಖಾನ್​ ಟಿ-20 ಕ್ರಿಕೆಟ್​ನಲ್ಲಿ ಮಹತ್ವದ ದಾಖಲೆಗೆ ಪಾತ್ರರಾಗಿದ್ದಾರೆ.

ವಿಶ್ವದ ನಂಬರ್​ 1 ಟಿ-20 ಬೌಲರ್​ ಆಗಿರುವ ರಶೀದ್ ಖಾನ್​ ಟಿ-20 ಕ್ರಿಕೆಟ್​ನಲ್ಲಿ ವೇಗವಾಗಿ 300 ವಿಕೆಟ್​ ಪಡೆದ ದಾಖಲೆಯ ಜೊತೆಗೆ ಈ ಸಾಧನೆ ಮಾಡಿದ ಕಿರಿಯ ಬೌಲರ್​ ಎನಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ರಶೀದ್​ ಲೂಸಿಯಾ ಜೌಕ್ಸ್​ ತಂಡದ ಮೊಹಮ್ಮದ್​ ನಬಿ ಅವರ ವಿಕೆಟ್​ ಪಡೆಯುವ ಮೂಲಕ ಟಿ-20ಯಲ್ಲಿ 300 ವಿಕೆಟ್​ ಪೂರ್ಣಗೊಳಿಸಿದರು. ಇವರು ಈ ಸಾಧನೆಗಾಗಿ 213 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದಿರುವ 8ನೇ ಬೌಲರ್​ ಎಂಬ ಶ್ರೇಯಕ್ಕೆ ರಶೀದ್​ ಪಾತ್ರರಾಗಿದ್ದಾರೆ. ರಶೀದ್ ಅಫ್ಘಾನಿಸ್ತಾನದ ಜೊತೆಗೆ​ ಸಿಪಿಎಲ್​, ಐಪಿಎಲ್​, ಬಿಬಿಎಲ್​, ಪಿಎಸ್​ಎಲ್​, ಟಿ-20 ಬ್ಲಾಸ್ಟ್​ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್​ನಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ನ ಪ್ರಧಾನ ಬೌಲರ್​ ಆಗಿದ್ದಾರೆ.

ವೆಸ್ಟ್​ ಇಂಡೀಸ್​ ದಿಗ್ಗಜ ಡ್ವೇನ್​ ಬ್ರಾವೋ 457 ಪಂದ್ಯಗಳಿಂದ 499 ವಿಕೆಟ್​ ಪಡೆದು ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ಇವರ ನಂತರ ಲಸಿತ್​ ಮಾಲಿಂಗ(390), ಸುನಿಲ್ ನರೈನ್​(382), ಇಮ್ರಾನ್​ ತಾಹೀರ್​(382), ಶಕಿಬ್​ ಅಲ್​ ಹಸನ್​(354), ಸೊಹೈಲ್​ ತನ್ವೀರ್​(353), ಶಾಹೀದ್​ ಅಫ್ರಿದಿ(339) ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.