ದುಬೈ: ಕನ್ನಡಿಗ ಮನೀಶ್ ಪಾಂಡೆ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರೆತಾಗಿಯೂ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 158 ರನ್ಗಳಿಸಿದೆ.
ಟಾಸ್ ಗೆದ್ದ ಹೈದರಾಬಾದ್ ತಂಡ ನಿಧಾನಗತಿ ಆಟಕ್ಕೆ ಮೊರೆ ಹೋಯಿತು. ಕಳೆದ ಪಂದ್ಯದಲ್ಲಿ 97 ರನ್ಗಳಿಸಿದ್ದ ಬೈರ್ಸ್ಟೋವ್ ಇಂದು 19 ಎಸೆತಗಳಲ್ಲಿ 16 ರನ್ಗಳಿಸಿ ಔಟಾದರು.
ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ವಾರ್ನರ್ ಹಾಗೂ ಪಾಂಡೆ 73 ರನ್ ಸೇರಿಸಿ ತಂಡದಕ್ಕೆ ಚೇತರಿಕೆ ನೀಡಿದರು. ಆದರೆ ಈ ಜೋಡಿ ವಿಕೆಟ್ ಉಳಿಸಿಕೊಳ್ಳಲು ಹೋಗಿ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದರಿಂದ ರನ್ರೇಟ್ ಪ್ರಮಾಣ ಕುಸಿಯಿತು.
-
Innings Break!@rajasthanroyals restrict #SRH to a total of 158/3 . Will this be chased down by #RR or will #SRH pull things back?
— IndianPremierLeague (@IPL) October 11, 2020 " class="align-text-top noRightClick twitterSection" data="
Live - https://t.co/uaylR8mH7g #Dream11IPL pic.twitter.com/f8qzl8NKjj
">Innings Break!@rajasthanroyals restrict #SRH to a total of 158/3 . Will this be chased down by #RR or will #SRH pull things back?
— IndianPremierLeague (@IPL) October 11, 2020
Live - https://t.co/uaylR8mH7g #Dream11IPL pic.twitter.com/f8qzl8NKjjInnings Break!@rajasthanroyals restrict #SRH to a total of 158/3 . Will this be chased down by #RR or will #SRH pull things back?
— IndianPremierLeague (@IPL) October 11, 2020
Live - https://t.co/uaylR8mH7g #Dream11IPL pic.twitter.com/f8qzl8NKjj
ವಾರ್ನರ್ 38 ಎಸೆತಗಳಲ್ಲಿ 2 ಸಿಕ್ಸರ್ಸ್ ಹಾಗೂ 3 ಬೌಂಡರಿ ಸಹಿತ 48 ಹಾಗೂ ಮನೀಶ್ ಪಾಂಡೆ 44 ಎಸೆತಗಳಲ್ಲಿ 3 ಸಿಕ್ಸರ್ಸ್ ಹಾಗೂ 2 ಬೌಡರಿ ಸಹಿತ 54 ರನ್ಗಳಿಸಿ ಉನಾದ್ಕಟ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಎರಡು ಓವರ್ಗಳಲ್ಲಿ ಅಬ್ಬರಿಸಿದ ವಿಲಿಯಮ್ಸನ್ 12 ಎಸೆತಗಳಲ್ಲಿ 22, ಪ್ರಿಯಮ್ ಗರ್ಗ್ 8 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ 15 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.
ರಾಜಸ್ಥಾನ್ ಪರ ಆರ್ಚರ್ 25ಕ್ಕೆ 1, ಕಾರ್ತಿಕ್ ತ್ಯಾಗಿ 29ಕ್ಕೆ 1, ಉನಾದ್ಕಟ್ 31ಕ್ಕೆ 1 ವಿಕೆಟ್ ಪಡೆದರು.