ETV Bharat / sports

ವಿದೇಶಿ ಲೀಗ್​​ಗಳಲ್ಲಿ ಆಡಲು ಭಾರತೀಯರಿಗೂ ಅವಕಾಶ ನೀಡಿ ಎಂದ ರೈನಾ, ಇರ್ಫಾನ್ - ಭಾರತೀಯ ಕ್ರಿಕೆಟ್​ ಮಂಡಳಿ

ಭಾರತೀಯ ಕ್ರಿಕೆಟ್​​ ಮಂಡಳಿ ಜತೆ ಗುತ್ತಿಗೆ ಇಲ್ಲದ ಪ್ಲೇಯರ್ಸ್​​ಗಳಿಗೆ ವಿದೇಶಿ ಕ್ರಿಕೆಟ್​​ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಪ್ಲೇಯರ್ಸ್​​ಗಳಿಬ್ಬರೂ ಮನವಿ ಮಾಡಿಕೊಂಡಿದ್ದಾರೆ.

Raina, Pathan
Raina, Pathan
author img

By

Published : May 10, 2020, 1:07 PM IST

ನವದೆಹಲಿ: ವಿದೇಶಗಳಲ್ಲಿ ನಡೆಯುವ ಕ್ರಿಕೆಟ್​ ಟೂರ್ನಿಗಳಲ್ಲಿ ಭಾಗಿಯಾಗಲೂ ಭಾರತೀಯ ಪ್ಲೇಯರ್ಸ್​ಗಳಿಗೂ(ಗುತ್ತಿಗೆ ಮಾಡಿಕೊಳ್ಳದ ಪ್ಲೇಯರ್ಸ್​) ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಬೌಲರ್​​ ಇರ್ಫಾನ್​ ಪಠಾಣ್​ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ.

2020ರ ಜನವರಿ ತಿಂಗಳಲ್ಲಿ ಎಲ್ಲ ರೀತಿಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಂಡಿರುವ ಇರ್ಫಾನ್​ ಪಠಾಣ್​, ಹಾಗೂ ಟೀಂ ಇಂಡಿಯಾ ತಂಡದಲ್ಲಿ ಮತ್ತೊಮ್ಮೆ ಜಾಗ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವ ಸುರೇಶ್​ ರೈನಾ, ಜುಲೈ 2018ರಲ್ಲಿ ಭಾರತದ ಪರ ಕೊನೆಯ ಪಂದ್ಯದಲ್ಲಿ ಭಾಗಿಯಾಗಿದ್ದರು.

Raina, Pathan
ರೈನಾ, ಇರ್ಫಾನ್ ಮನವಿ

ಪಠಾಣ್​ ಜತೆ ಇನ್​ಸ್ಟಾಗ್ರಾಂನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಬಿಸಿಸಿಐ, ಐಸಿಸಿ ಹಾಗೂ ಫ್ರಾಂಚೈಸಿಗಳು ಸೇರಿ ಯಾರು ರಾಷ್ಟ್ರೀಯ ತಂಡದಲ್ಲಿ ಕ್ರಿಕೆಟ್​​ ಆಡುತ್ತಿಲ್ಲವೋ ಅಂತಹ ಪ್ಲೇಯರ್ಸ್​ಗಳಿಗೆ ವಿದೇಶಿ ಟೂರ್ನಿಗಳಲ್ಲಿ ಭಾಗಿಯಾಗಲು ಅನುಮತಿ ನೀಡಬೇಕು. ಎರಡು ವಿದೇಶಿ ಲೀಗ್​​ಗಳಲ್ಲಿ ಭಾಗಿಯಾಗಲು ಅವಕಾಶ ನೀಡಿದ್ರೆ, ತಂಡಕ್ಕೆ ಕಮ್​ಬ್ಯಾಕ್​ ಮಾಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಸದ್ಯ ಜಮ್ಮು-ಕಾಶ್ಮೀರ ಕ್ರಿಕೆಟ್​ ತಂಡದ ಕೋಚ್​​ ಆಗಿರುವ ಇರ್ಫಾನ್​ ಪಠಾಣ್​, ಈಗಾಗಲೇ ನನ್ನ ಬಳಿ ಮೂರು ಫ್ರಾಂಚೈಸಿಗಳು ಮಾತುಕತೆ ನಡೆಸಿದ್ದವು. ಆದರೆ ಬಿಸಿಸಿಐ ಅವಕಾಶ ನೀಡದ ಕಾರಣ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಸುರೇಶ್​ ರೈನಾ ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಪರ ಬ್ಯಾಟ್​ ಬೀಸುತ್ತಿದ್ದಾರೆ. ಆದರೆ ದೇಶದಲ್ಲಿ ಲಾಕ್​ಡೌನ್​ ಹಾಗೂ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಟೂರ್ನಿ ಮುಂದೂಡಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.