ದುಬೈ : ಆಸ್ಟ್ರೇಲಿಯಾ ವಿರುದ್ಧದ ಮೂರು ಮಾದರಿಯ ಸರಣಿಗಾಗಿ ಬಿಸಿಸಿಐ ಆಯ್ಕೆ ಸಮಿತಿ ಇತ್ತೀಚೆಗೆ ಭಾರತ ತಂಡವನ್ನು ಘೋಷಿಸಿದ್ದು, ಕನ್ನಡಿಗ ರಾಹುಲ್ರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದ್ದಲ್ಲದೆ, ವೈಟ್ ಬಾಲ್ ಕ್ರಿಕೆಟ್ ತಂಡಕ್ಕೆ ಉಪನಾಯಕನನ್ನಾಗಿ ಆಯ್ಕೆ ಮಾಡಿತ್ತು.
ರಾಹುಲ್ ಐಪಿಎಲ್(672) ಗರಿಷ್ಠ ಸ್ಕೋರರ್ ಆಗಿದ್ದರಿಂದ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವುದು ಸರಿಯಲ್ಲ ಎಂದು ಕೆಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಆದರೆ ಹಲವು ಮಂದಿ ರಾಹುಲ್ ಆಯ್ಕೆ ಸಮರ್ಥಿಸಿದ್ದರು. ಇದೀಗ ಸ್ವತಃ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ರಾಹುಲ್ರನ್ನು ಎಲ್ಲಾ ಸ್ವರೂಪಗಳಲ್ಲೂ ಕೊಡುಗೆ ನೀಡುವ ಸಾಮರ್ಥ್ಯವುಳ್ಳ ಆಟಗಾರ ಎಂದು ಬಣ್ಣಿಸಿದ್ದಾರೆ.
ನಾನೊಬ್ಬ ಕ್ರಿಕೆಟಿಗನಾಗಿ ಹೇಳುವುದಾದರೆ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಕೆ.ಎಲ್. ರಾಹುಲ್ ಅವರಿಗೆ ಸಾಕಷ್ಟು ಸಮಯವಿದೆ. ಅವರು ಎಲ್ಲಾ ಸ್ವರೂಪದ ಕ್ರಿಕೆಟ್ನಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಪರ ಅತೀ ಹೆಚ್ಚು ರನ್ ಪೇರಿಸಿದರೂ ಅವರ ತಂಡ ಪ್ಲೈ ಆಫ್ ಗೆ ತಲುಪಲೂ ವಿಫಲರಾಗಿದೆ, ಆದರೆ ಅವರು ಭಾರತ ತಂಡದಲ್ಲಿ ಸಿಡಿರುವ ರನ್ಗಳು ಖಂಡಿತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಗಂಗೂಲಿ ಭಾವಿಸಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ , ಆಸ್ಟ್ರೇಲಿಯಾ) ದಲ್ಲಿ ಸರಣಿ ನಡೆಯುವಾಗ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಅವರು( ಕೊಹ್ಲಿ) ತವರಿನಲ್ಲಿ ಆಡುವುದಕ್ಕಿಂತ ಉತ್ತಮವಾಗಿ ವಿದೇಶಿ ಟೂರ್ನಿಗಳಲ್ಲಿ ಆಡಬೇಕೆಂದು ಅರ್ಥಮಾಡಿಕೊಳ್ಳಬೇಕು. ಹೌದು ಈಗಾಗಲೆ ಅವರು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್(2018)ರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಿತ್ತು. ನ್ಯೂಜಿಲ್ಯಾಂಡ್ನಲ್ಲಿ ಈ ವರ್ಷ ನಡೆದ ಸರಣಿಯಲ್ಲೂ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದನ್ನೆಲ್ಲಾ ಅರಿತು ಮುಂದಿನ ಸರಣಿಯಲ್ಲಿ ಆಡಬೇಕಿದೆ ದಾದಾ ಉಲ್ಲೇಖಿಸಿದ್ದಾರೆ.