ದುಬೈ: ಅಸಾಧಾರಣ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದ ಮೂಲಕ ಡೆಲ್ಲಿ ಕ್ಯಾಪಿಟಲ್ ವಿರುದ್ಧ 88 ರನ್ಗಳ ಬೃಹತ್ ಜಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ರೇಸ್ಗೆ ಮರಳಿದೆ.
ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ 220 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಲ್ಲಿ 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 88 ರನ್ಗಳ ಅಂತರದ ಸೋಲು ಕಂಡಿದ್ದಲ್ಲದೆ ಅಂಕಪಟ್ಟಿಯಲ್ಲೂ ಎರಡನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸನ್ರೈಸರ್ಸ್ ಹೈದರಾಬಾದ್ ಉತ್ತಮ ರನ್ರೇಟ್ ಪಡೆದರೂ 6ನೇ ಸ್ಥಾನದಲ್ಲೇ ಮುಂದುವರಿದಿದೆ.
-
A well deserved victory for @SunRisers as they win by 88 runs.#Dream11IPL pic.twitter.com/PqlaF6IolV
— IndianPremierLeague (@IPL) October 27, 2020 " class="align-text-top noRightClick twitterSection" data="
">A well deserved victory for @SunRisers as they win by 88 runs.#Dream11IPL pic.twitter.com/PqlaF6IolV
— IndianPremierLeague (@IPL) October 27, 2020A well deserved victory for @SunRisers as they win by 88 runs.#Dream11IPL pic.twitter.com/PqlaF6IolV
— IndianPremierLeague (@IPL) October 27, 2020
220 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡ ಮೊದಲ ಓವರ್ನಲ್ಲೇ ಶಿಖರ್ ಧವನ್(0) ವಿಕೆಟ್ ಕಳೆದುಕೊಂಡಿತು. ನಂತರ 3ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ಮಾರ್ಕಸ್ ಸ್ಟೊಯ್ನಿಸ್, ನದೀಮ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದರು. ನಂತರ ರಹಾನೆ(26) ಹಾಗೂ ಹೆಟ್ಮೈರ್(16) ರನ್ನ ರಶೀದ್ ಖಾನ್ ಪೆವಿಲಿಯನ್ಗಟ್ಟಿದರು.
ಇವರಿಬ್ಬರ ನಂತರ ನಿರಂತರ ವಿಕೆಟ್ ಕಳೆದುಕೊಂಡ ಡೆಲ್ಲಿ, 131ಕ್ಕೆ ಆಲೌಟ್ ಆಯಿತು. ಪಂತ್ 36 ರನ್ಗಳಿಸಿ ಗರಿಷ್ಠ ಸ್ಕೋರರ್ ಆದರು. ಅಯ್ಯರ್ 7, ಅಕ್ಷರ್ 1, ರಬಾಡ 3, ಅಶ್ವಿನ್ 7, ನೋಕಿಯಾ 1 ರನ್ಗೆ ವಿಕೆಟ್ ಒಪ್ಪಿಸಿದರು.
ಹೈದರಾಬಾದ್ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ರಶೀದ್ ಖಾನ್ 4 ಓವರ್ಗಳಲ್ಲಿ 7 ರನ್ ನೀಡಿ 3 ವಿಕೆಟ್, ನಟರಾಜನ್ 26ಕ್ಕೆ 2, ಸಂದೀಪ್ ಶರ್ಮಾ 27ಕ್ಕೆ 2, ನದೀಮ್,ಹೋಲ್ಡರ್, ವಿಜಯ್ ಶಂಕರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ವಾರ್ನರ್(55) ಹಾಗೂ ವೃದ್ಧಿಮಾನ್ ಸಹಾ(87) ಸ್ಫೋಟಕ ಅರ್ಧಶತಕ ಹಾಗೂ ಮನೀಶ್ ಪಾಂಡೆ ಅವರ 44 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 219 ರನ್ಗಳಿಸಿತ್ತು.