ETV Bharat / sports

ಅಶ್ವಿನ್ ಸ್ಪಿನ್​ ಮೋಡಿಗೆ ಮುರಿದು ಬಿತ್ತು ಮುರುಳೀಧರನ್​ ದಾಖಲೆ - ಮುರುಳೀಧರನ್​ ದಾಖಲೆ ಬ್ರೇಕ್ ಮಾಡಿದ ಅಶ್ವಿನ್​

ಭಾರತದ ಪರ ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ ಆರ್​. ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್​ ಪಡೆದಿರುವ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದರೆ, ಕಪಿಲ್​ ದೇವ್​(434), ಹರ್ಭಜನ್ ಸಿಂಗ್(417) ನಂತರ 375 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ.

ರವಿಚಂದ್ರನ್​ ಅಶ್ವಿನ್
ರವಿಚಂದ್ರನ್​ ಅಶ್ವಿನ್
author img

By

Published : Dec 29, 2020, 7:30 PM IST

Updated : Dec 29, 2020, 7:47 PM IST

ಮೆಲ್ಬೋರ್ನ್​: ಭಾರತ ತಂಡದ ಪ್ರಧಾನ ಟೆಸ್ಟ್​ ಸ್ಪಿನ್ನರ್​ ಆಗಿರುವ ಆರ್​ ಅಶ್ವಿನ್​ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಮುರುಳೀದರನ್​ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಬ್ರೇಕ್​ ಮಾಡಿದ್ದಾರೆ.

ಭಾರತದ ಪರ ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ ಆರ್​. ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್​ ಪಡೆದಿರುವ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದರೆ, ಕಪಿಲ್​ ದೇವ್​(434), ಹರ್ಭಜನ್ ಸಿಂಗ್(417) ನಂತರ 375 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ.

ಆದರೆ, 2ನೇ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಆಸೀಸ್​ ಕೊನೆಯ ಬ್ಯಾಟ್ಸ್​ಮನ್​ ಹೇಜಲ್​ವುಡ್​ರನ್ನು ಬೌಲ್ಡ್​ ಮಾಡುವ ಮೂಲಕ ತಮಿಳುನಾಡಿನ ಸ್ಪಿನ್ನರ್​ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಹೆಚ್ಚು 192ನೇ ಎಡಗೈ ಬ್ಯಾಟ್ಸ್​ಮನ್​ರನ್ನು ಔಟ್ ಮಾಡಿದ ದಾಖಲೆ ನಿರ್ಮಿಸಿದರು.

ಈ ದಾಖಲೆ ಶ್ರೀಲಂಕಾದ ಬೌಲಿಂಗ್ ಲೆಜೆಂಡ್​ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿತ್ತು. ಅವರು 191 ಎಡಗೈ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ್ದರು. ಇದೀ ಅಶ್ವಿನ್ 192 ಎಡಗೈ ಬ್ಯಾಟ್ಸ್​ಮನ್​ಗಳ ವಿಕೆಟ್​ ಪಡೆದು ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇವರಿಬ್ಬರನ್ನು ಬಿಟ್ಟರೆ ಈ ಸಾಲಿನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್(186), ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಕ್​ಗ್ರಾಥ್ (172), ಮತ್ತು ಶೇನ್ ವಾರ್ನ್(172) ಹಾಗೂ ಕರ್ನಾಟಕದ ಅನಿಲ್ ಕುಂಬ್ಳೆ (167) ನಂತರದ ಸ್ಥಾನದಲ್ಲಿದ್ದಾರೆ.

ಇಂದು ಕೊನೆಗೊಂಡ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಭಾರತ ತಂಡ 8 ವಿಕೆಟ್​ಗಳಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಿತು. ಅಶ್ವಿನ್ ಎರಡೂ ಇನ್ನಿಂಗ್ಸ್​ಗಳಿಂದ 5 ವಿಕೆಟ್​ ಪಡೆದಿದ್ದರು.

Last Updated : Dec 29, 2020, 7:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.