ಮುಂಬೈ: ಕೊನೆಯ ಓವರ್ನಲ್ಲಿ 13 ರನ್ ಬೇಕಿದ್ದಾಗ ಯಶಸ್ವಿಯಾಗಿ ಎದುರಾಳಿಯನ್ನು ನಿಯಂತ್ರಿಸಿದ ಯುವ ಬೌಲರ್ ಅರ್ಷ್‌ದೀಪ್ ಸಿಂಗ್ ಬಗ್ಗೆ ನಾಯಕ ಕೆ.ಎಲ್.ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 221 ರನ್ ಗಳಿಸಿ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸಾಮ್ಸನ್ ಅವರ ಅದ್ಭುತ ಶತಕ ಪಂಜಾಬ್ ನಿರೀಕ್ಷೆಯನ್ನು ಹುಸಿಗೊಳಿಸಿದ್ದಲ್ಲದೆ, ಪಂದ್ಯವನ್ನು ಕಸಿದುಕೊಳ್ಳುವ ಮುನ್ಸೂಚನೆ ನೀಡಿತ್ತು. ಕೊನೆಯ ಓವರ್ನಲ್ಲಿ ಕೇವಲ 13 ರನ್ಗಳ ಅಗತ್ಯವಿತ್ತು. ಸಾಮ್ಸನ್ ಕ್ರೀಸ್ನಲ್ಲಿದ್ದರಿಂದ ಪಂದ್ಯ ರಾಜಸ್ಥಾನ ಪಾಲಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅರ್ಷದೀಪ್ ಕೇವಲ 8 ರನ್ ಬಿಟ್ಟುಕೊಟ್ಟು ಪಂಜಾಬ್ ಕಿಂಗ್ಸ್ಗೆ 4 ರನ್ಗಳ ರೋಚಕ ಜಯ ತಂದುಕೊಟ್ಟರು.
-
Some way to start a campaign 🦁
— K L Rahul (@klrahul11) April 12, 2021 " class="align-text-top noRightClick twitterSection" data="
So proud of these guys!@PunjabKingsIPL pic.twitter.com/R5s0slbvLa
">Some way to start a campaign 🦁
— K L Rahul (@klrahul11) April 12, 2021
So proud of these guys!@PunjabKingsIPL pic.twitter.com/R5s0slbvLaSome way to start a campaign 🦁
— K L Rahul (@klrahul11) April 12, 2021
So proud of these guys!@PunjabKingsIPL pic.twitter.com/R5s0slbvLa
ಪಂದ್ಯ ಮುಗಿದ ನಂತರ ಮಾತನಾಡಿದ ಕೆ.ಎಲ್.ರಾಹುಲ್ ತಾವು ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ಅಥವಾ ಒತ್ತಡದ ಸಂದರ್ಭದಲ್ಲಿ ಯುವ ಬೌಲರ್ ಅರ್ಷ್‌ದೀಪ್ ಸಿಂಗ್ಗೆ ಚೆಂಡು ನೀಡಲು ಬಯಸುವುದಾಗಿ ತಿಳಿಸಿದ್ದಾರೆ.
"ನಿರ್ಣಾಯಕ ಓವರ್ ಮಾಡಬೇಕಾದಂತಹ ಸಂದರ್ಭದಲ್ಲಿ ನಾನು ಅರ್ಷ್‌ದೀಪ್ ಸಿಂಗ್ಗೆ ಚೆಂಡನ್ನು ನೀಡುತ್ತೇನೆ. ಆತ ಕೂಡ ಒತ್ತಡದ ಓವರ್ಗಳನ್ನು ಎಸೆಯಲು ಆಲೋಚಿಸುವುದಿಲ್ಲ. ಅವರೂ ಕೂಡ ಇಂತಹ ಓವರ್ ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ" ಎಂದು ರಾಹುಲ್ 22 ವರ್ಷದ ಬೌಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಕೊನೆಯ ಓವರ್ನಲ್ಲಿ ಸಿಂಗಲ್ ರನ್ ನಿರಾಕರಿಸಿದ ಸಾಮ್ಸನ್ ಪರ ನಿಂತ ಸಂಗಕ್ಕರ ಹೇಳಿದ್ದೇನು?