ಸಿಡ್ನಿ: ಚೇತೇಶ್ವರ ಪೂಜಾರ ಅವರ ನಿಧಾನಗತಿಯ ಬ್ಯಾಟಿಂಗ್ ಭಾರತದ ಇತರ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
"ಇದು ಸರಿಯಾದ ವಿಧಾನ ಎಂದು ನಾನು ಭಾವಿಸುವುದಿಲ್ಲ, ಅವರು ತಮ್ಮ ರನ್ ರೇಟ್ನಲ್ಲಿ ಸ್ವಲ್ಪ ಹೆಚ್ಚು ಕಾರ್ಯಪ್ರವೃತ್ತರಾಗಿರಬೇಕು ಎಂದು ಭಾವಿಸುತ್ತೇನೆ. ಏಕೆಂದರೆ ಅದು ಅವರ ಬ್ಯಾಟಿಂಗ್ ಪಾಲುದಾರನ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿದೆ" ಎಂದು ಪಾಂಟಿಂಗ್ ಟ್ವೀಟ್ ಮಾಡಿದ್ದಾರೆ.
-
I don't think it was the right approach, I think he needed to be a bit more proactive with his scoring rate because I felt it was putting too much pressure on his batting partners https://t.co/2OhmdATvke
— Ricky Ponting AO (@RickyPonting) January 9, 2021 " class="align-text-top noRightClick twitterSection" data="
">I don't think it was the right approach, I think he needed to be a bit more proactive with his scoring rate because I felt it was putting too much pressure on his batting partners https://t.co/2OhmdATvke
— Ricky Ponting AO (@RickyPonting) January 9, 2021I don't think it was the right approach, I think he needed to be a bit more proactive with his scoring rate because I felt it was putting too much pressure on his batting partners https://t.co/2OhmdATvke
— Ricky Ponting AO (@RickyPonting) January 9, 2021
2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಗೆದ್ದಿದ್ದ ಪೂಜಾರ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಬಿಗಿ ದಾಳಿಗೆ 176 ಎಸೆತಗಳಲ್ಲಿ 28.41 ಸ್ಟ್ರೈಕ್ ರೇಟ್ನಲ್ಲಿ 50 ರನ್ ಗಳಿಸಿದ್ದಾರೆ.
ಓದಿ ಆಸೀಸ್ಗೆ ಲಾಬುಶೇನ್, ಸ್ಮಿತ್ ಆಸರೆ: ದಿನಾಂತ್ಯಕ್ಕೆ 197 ರನ್ ಮುನ್ನಡೆ ಸಾಧಿಸಿದ ಕಾಂಗರೂ ಪಡೆ
ಅರ್ಧಶತಕ ಸಿಡಿಸಿದ ಪೂಜಾರ ಆಸ್ಟ್ರೇಲಿಯಾ ಪೇಸ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಪೇನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಡೆಯುತ್ತಿರುವ ಸರಣಿಯಲ್ಲಿ ಪುಜಾರ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಥನ್ ಲಿಯಾನ್ಗೆ ವಿಕೆಟ್ ಒಪ್ಪಿಸಿದ್ದು ಬಿಟ್ಟರೆ ಉಳಿದೆಲ್ಲಾ ಇನ್ನಿಂಗ್ಸ್ನಲ್ಲೂ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊನೆಯ ಪ್ರವಾಸದಲ್ಲಿ ಮೂರು ಶತಕಗಳನ್ನು ಗಳಿಸಿದ್ದ ಪೂಜಾರ, ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 113 ರನ್ ಗಳಿಸಿದ್ದು, ಒಂದು ಅರ್ಧಶತಕ ಸಿಡಿಸಿದ್ದಾರೆ.