ನವದೆಹಲಿ : ಭಾರತ ಟೆಸ್ಟ್ ತಂಡದ ಖಾಯಂ ಆಟಗಾರ ಚೇತೇಶ್ವರ್ ಪೂಜಾರ ಪಸ್ತುತ ಕ್ರಿಕೆಟಿಗರನ್ನೊಳಗೊಂಡ ಟೆಸ್ಟ್ ತಂಡ ಪ್ರಕಟಿಸಿದ್ದು, ಅದರಲ್ಲಿ ನಾಲ್ವರು ಭಾರತೀಯರು, 3 ಆಸ್ಟ್ರೇಲಿಯನ್ನರು, ಇಬ್ಬರು ಕಿವೀಸ್ ಹಾಗೂ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.
ಕ್ರಿಕ್ಬಜ್ನಲ್ಲಿ ಹರ್ಷಬೋಗ್ಲೆ ಅವರ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ಪೂಜಾರ, ತಮ್ಮ ಮತ್ತು ದ್ರಾವಿಡ್ ಜೊತೆಗಿನ ಹೋಲಿಕೆ, ವಿರಾಟ್ ಜೊತೆ ಬ್ಯಾಟಿಂಗ್ ಹಾಗೂ ತರಬೇತಿ ಸೇರಿದಂತೆ ಹಲವಾರು ಕ್ರಿಕೆಟ್ಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡರು. ಇದೇ ವೇಳೆ ವಿಶ್ವದ ಬೆಸ್ಟ್ ಟೆಸ್ಟ್ ಇಲೆವೆನ್ ಕೂಡ ಹೆಸರಿಸಿದ್ದಾರೆ.
ಪೂಜಾರ ಆರಂಭಿಕರಾಗಿ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ರನ್ನು ಆಯ್ಕೆ ಮಾಡಿದ್ದಾರೆ. ತಮ್ಮನ್ನು 3ನೇ ಕ್ರಮಾಂದಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟಿವ್ ಸ್ಮಿತ್ರನ್ನು 5ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್ಸ್ಟೋಕ್ಸ್ 6ನೇ ಹಾಗೂ ವಿಕೆಟ್ ಕೀಪರ್ ಮತ್ತು 7ನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಕಿವೀಸ್ನ ಬಿಜೆ ಜೆ ವ್ಯಾಟ್ಲಿಂಗ್ ಅವರನ್ನು ಆಯ್ಕೆಮಾಡಿದ್ದಾರೆ.
ಪೂಜಾರ ತಮ್ಮ ನೆಚ್ಚಿನ ತಂಡದಲ್ಲಿ ಏಕೈಕ ಸ್ಮಿನ್ನರ್ ಆಗಿ ಭಾರತದ ಆರ್ ಅಶ್ವಿನ್ರನ್ನ ಹೆಸರಿಸಿದ್ದಾರೆ. ವೇಗದ ವಿಭಾಗದಲ್ಲಿ ಬುಮ್ರಾ, ಪ್ಯಾಟ್ ಕಮಿನ್ಸ್ ಹಾಗೂ ಕಗಿಸೊ ರಬಾಡರನ್ನು ಹೆಸರಿಸಿದ್ದಾರೆ. 12 ಮತ್ತು 13ನೇ ಆಟಗಾರನಾಗಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿದ್ದಾರೆ.
ಚೇತೇಶ್ವರ್ ಪೂಜಾರರ ನೆಚ್ಚಿನ ಟೆಸ್ಟ್ ತಂಡ: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಬಿಜೆ ವ್ಯಾಟ್ಲಿಂಗ್(ವಿಕೆಟ್ ಕೀಪರ್) ಆರ್ ಅಶ್ವಿನ್, ಪ್ಯಾಟ್ ಕಮ್ಮಿನ್ಸ್, ಕಗಿಸೋ ರಬಡಾ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ 12 ಮತ್ತು 13ನೇ ಆಟಗಾರರು.