ETV Bharat / sports

ಡೀನ್ ಜೋನ್ಸ್​ ಸ್ಥಾನಕ್ಕೆ ಹರ್ಷೆಲ್​ ಗಿಬ್ಸ್​ ನೇಮಕ ಮಾಡಿದ ಕರಾಚಿ ಕಿಂಗ್ಸ್ - ದಕ್ಷಿಣ ಆಫ್ರಿಕಾದ ಮಾಜಿ ನಾಯಕ

ಆಸ್ಟ್ರೇಲಿಯಾ ತಂಡದ ಡೀನ್ ಜೋನ್ಸ್​ ಕಳೆದ 2 ಆವೃತ್ತಿಯಲ್ಲಿ ಕರಾಚಿ ಕಿಂಗ್ಸ್​ ತಂಡದ ಮುಖ್ಯ ಕೋಚ್​ ಆಗಿದ್ದರು. ಆದರೆ 59ನೇ ವಯಸ್ಸಿನ ಆಸೀಸ್ ಲೆಜೆಂಡ್​ ಕಳೆದ ವರ್ಷ ಮುಂಬೈನ ಹೋಟೆಲ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ಹಂಗಾಮಿ ಕೋಚ್​ ಆಗಿ ವಾಸೀಮ್ ಅಕ್ರಮ್​ ನೇಮಕವಾಗಿದ್ದರು.

ಹರ್ಷೆಲ್​ ಗಿಬ್ಸ್
ಹರ್ಷೆಲ್​ ಗಿಬ್ಸ್
author img

By

Published : Jan 2, 2021, 9:13 PM IST

ಕರಾಚಿ​: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್​ ಗಿಬ್ಸ್​ ಪಿಎಸ್​ಎಲ್​ನ ಹಾಲಿ ಚಾಂಪಿಯನ್​ ಕರಾಚಿ ಕಿಂಗ್ಸ್​ ತಂಡದ ಮುಖ್ಯ ಕೋಚ್​ ಆಗಿ ಶನಿವಾರ ನೇಮಕಗೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡದ ಡೀನ್ ಜೋನ್ಸ್​ ಕಳೆದ 2 ಆವೃತ್ತಿಯಲ್ಲಿ ಕರಾಚಿ ಕಿಂಗ್ಸ್​ ತಂಡದ ಮುಖ್ಯ ಕೋಚ್​ ಆಗಿದ್ದರು. ಆದರೆ 59ನೇ ವಯಸ್ಸಿನ ಆಸೀಸ್ ಲೆಜೆಂಡ್​ ಕಳೆದ ವರ್ಷ ಮುಂಬೈನ ಹೋಟೆಲ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ಹಂಗಾಮಿ ಕೋಚ್​ ಆಗಿ ವಾಸೀಮ್ ಅಕ್ರಮ್​ ನೇಮಕವಾಗಿದ್ದರು.

  • Former South Africa batsman Herschelle Gibbs has been appointed as the new head coach of Karachi Kings in the PSL 🔥

    How excited are you by this news, Karachi fans? pic.twitter.com/rVU5B42OjU

    — ICC (@ICC) January 2, 2021 " class="align-text-top noRightClick twitterSection" data=" ">

ಆಕ್ರಮಣಕಾರಿ ಮತ್ತು ಉತ್ಸಾಹದಿಂದ ಆಟದ ಗತಿಯನ್ನೇ ಬದಲಾಯಿಸುತ್ತಿದ್ದ ಹರ್ಷೆಲ್​ ಗಿಬ್ಸ್​ ಕೋಚ್​ ಆಗಿಯೂ ಅದೇ ರೀತಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಭಾವಿಸಿದ್ದೇವೆ. ಸಂಪೂರ್ಣ ಮತ್ತು ಶಿಸ್ತಿನ ಬಲದಲ್ಲಿ ಉತ್ತಮ ನಂಬಿಕೆಯುಳ್ಳ ಅವರನ್ನು ಕರಾಚಿ ಕಿಂಗ್ಸ್​ನ ಹೊಸ ಹೆಡ್​ ಕೋಚ್​ ಆಗಿ ನೇಮಕ ಮಾಡಲಾಗಿದೆ ಎಂದು ಹೇಳಲು ಹೆಮ್ಮ ಪಡುತ್ತೇವೆ ಎಂದು ಫ್ರಾಂಚೈಸಿ ಟ್ವೀಟ್ ಮಾಡಿದೆ.

ಹರ್ಷೆಲ್​ ಗಿಬ್ಸ್​ ದಕ್ಷಿಣ ಆಫ್ರಿಕಾ ಪರ 90 ಟೆಸ್ಟ್​ ಪಂದ್ಯಗಳಿಂದ 6167 ರನ್​, 248 ಏಕದಿನ ಪಂದ್ಯಗಳಿಂದ 8094 ರನ್​, 23 ಟಿ-20 ಪಂದ್ಯಗಳಿಂದ 400 ರನ್ ಬಾರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.