ETV Bharat / sports

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ: ರೈನಾ, ಭುವಿ ಇರುವ ಯುಪಿ ತಂಡಕ್ಕೆ ಪ್ರಿಯಂ ಗರ್ಗ್​ ನಾಯಕ

ಉತ್ತರ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಶುಕ್ರವಾರ ಈ ತಂಡವನ್ನು ಘೋಷಿಸಿದೆ. 2020ರಲ್ಲಿ ಪ್ರಿಯಂ ಗರ್ಗ್​ ಭಾರತ ಕಿರಿಯರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಜೇಯ ಫೈನಲ್​ ಪ್ರವೇಶಿಸಿದ್ದ ತಂಡ ಫೈನಲ್​ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು. ನಂತರ ಐಪಿಎಲ್​​​ನಲ್ಲೂ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

ಸಯ್ಯದ್ ಮುಷ್ತಾಕ್ ಅಲಿ ಟಿ20
ಸಯ್ಯದ್ ಮುಷ್ತಾಕ್ ಅಲಿ ಟಿ20
author img

By

Published : Jan 2, 2021, 8:14 PM IST

ಮುಂಬೈ: ಸಯ್ಯದ್​ ಮುಷ್ತಾಕ್ ಅಲಿ ಟೂರ್ನಿಗೆ ಯುಒಇಸಿಎ ಮೊದಲೆರಡು ಪಂದ್ಯಗಳಿಗೆ 15 ಸದಸ್ಯರ ತಂಡವನ್ನು ಘೋಷಣೆ ಮಾಡಿದ್ದು, ಅಂಡರ್​-19 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಪ್ರಿಯಂ ಗರ್ಗ್​ಗೆ ನಾಯಕತ್ವ ನೀಡಲಾಗಿದೆ.

ಉತ್ತರ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಶುಕ್ರವಾರ ಈ ತಂಡವನ್ನು ಘೋಷಿಸಿದೆ. 2020ರಲ್ಲಿ ಪ್ರಿಯಂ ಗರ್ಗ್​ ಭಾರತ ಕಿರಿಯರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಜೇಯ ಫೈನಲ್​ ಪ್ರವೇಶಿಸಿದ್ದ ತಂಡ ಫೈನಲ್​ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು. ನಂತರ ಐಪಿಎಲ್​ನಲ್ಲೂ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

ಯುಪಿ ತಂಡದಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಭುವನೇಶ್ವರ್​ ಕುಮಾರ್​ ಮತ್ತು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಸುರೇಶ್​ ರೈನಾ ಕೂಡ ಅವಕಾಶ ಪಡೆದಿದ್ದಾರೆ. ಆಲ್​ರೌಂಡರ್​ ಕರ್ಣ್​​ ಶರ್ಮಾ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ತಂಡದಲ್ಲಿ ಅವಕಾಶ ಪಡೆದಿರುವ ಇನ್ನಿತರ ಸ್ಟಾರ್​ ಆಟಗಾರರೆಂದರೆ ರಿಂಕು ಸಿಂಗ್​, ಅಂಕಿತ್ ರಜಪೂತ್​, ಶಿವಂ ಮಾವಿ ಕೂಡ ದೇಶಿ ಟಿ-20 ಲೀಗ್​ನಲ್ಲಿ ಆಡಲಿದ್ದಾರೆ.

ಸುರೇಶ್ ರೈನಾ- ಭುವನೇಶ್ವರ್​ ಕುಮಾರ್​
ಸುರೇಶ್ ರೈನಾ-ಭುವನೇಶ್ವರ್​ ಕುಮಾರ್​

2015/16ರಲ್ಲಿ ಚಾಂಪಿಯನ್​ ಆಗಿರುವ ಯುಪಿ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಪಂಜಾಬ್​, ರೈಲ್ವೇಸ್​ ಮತ್ತು ತ್ರಿಪುರ ತಂಡದೊಂದಿದೆ ಸೆಣಸಾಡಲಿದೆ.

ಉತ್ತರ ಪ್ರದೇಶ ತಂಡ:

ಪ್ರಿಯಮ್ ಗರ್ಗ್ (ನಾಯಕ), ಕರ್ಣ್ ಶರ್ಮಾ (ಉಪನಾಯಕ), ಸುರೇಶ್ ರೈನಾ, ರಿಂಕು ಸಿಂಗ್, ಮಾಧವ್ ಕೌಶಿಕ್, ಸಮರ್ಥ್ ಸಿಂಗ್, ಶುಭಮ್ ಚೌಬೆ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಅಂಕಿತ್ ರಾಜಪೂತ್, ಮೋಸಿನ್ ಖಾನ್, ಶಿವಂ ಮಾವಿ, ಶಿವ ಸಿಂಗ್, ಶಾನು ಸೈನಿ.

ಸ್ಟ್ಯಾಂಡ್‌ಬೈ ಆಟಗಾರರು: ಆಕ್ವಿಬ್ ಖಾನ್, ಸಮೀರ್ ಚೌಧರಿ, ಮೋಹಿತ್ ಜಂಗ್ರಾ, ಹರ್ದೀಪ್ ಸಿಂಗ್, ಅಭಿಷೇಕ್ ಗೋಸ್ವಾಮಿ, ನಳಿನ್ ಮಿಶ್ರಾ, ಪೂರ್ಣಾಂಕ್ ತ್ಯಾಗಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.