ETV Bharat / sports

ಪೃಥ್ವಿ ಶಾ ಸ್ಫೋಟಕ ಶತಕ: ಡೆಲ್ಲಿ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಜೈಪುರಿಯ ವಿದ್ಯಾಲಯ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಕೇವಲ 211 ರನ್​ಗಳಿಗೆ ಆಲೌಟ್ ಮಾಡಿತು. ಧವಳ್​ ಕುಲಕರ್ಣಿ 3 ವಿಕೆಟ್​, ಶಾಮ್ಸ್​ ಮುಲಾನಿ 2 ವಿಕೆಟ್​ ಪಡೆದು ಮಿಂಚಿದರು.

ಡೆಲ್ಲಿ ವಿರುದ್ಧ ಮುಂಬೈಗೆ 7 ವಿಕೆಟ್ ಜಯ
ಪೃಥ್ವಿ ಶಾ ಸ್ಪೋಟಕ ಶತಕ
author img

By

Published : Feb 21, 2021, 7:23 PM IST

ಜೈಪುರ: ಪೃಥ್ವಿ ಶಾ ಅವರ ಅಜೇಯ ಶತಕ ಮತ್ತು ಸೂರ್ಯಕುಮಾರ್ ಯಾದವ್​ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಮುಂಬೈ ತಂಡ ವಿಜಯ್ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ವಿರುದ್ಧ 7 ವಿಕೆಟ್​ಗಳ ಸುಲಭದ ಜಯ ಸಾಧಿಸಿದೆ.

ಜೈಪುರಿಯ ವಿದ್ಯಾಲಯ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಕೇವಲ 211 ರನ್​ಗಳಿಗೆ ಆಲೌಟ್ ಮಾಡಿತು. ಧವಳ್​ ಕುಲಕರ್ಣಿ 3 ವಿಕೆಟ್​, ಶಾಮ್ಸ್​ ಮುಲಾನಿ 2 ವಿಕೆಟ್​ ಪಡೆದು ಮಿಂಚಿದರು.

ಡೆಲ್ಲಿ ಪರ ಹಿಮ್ಮತ್​ ಸಿಂಗ್​ ಅಜೇಯ 106 ರನ್ ​ಗಳಿಸಿದರೆ, ಶಿವಂಕ್ ವಶಿಷ್ಠ್​ 55 ಹಾಗೂ ನಾಯಕ ಪ್ರದೀಪ್ ಸಂಗ್ವಾನ್ ಅಜೇಯ 28 ರನ್ ​ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅನುಭವಿ ಬ್ಯಾಟ್ಸ್​ಮನ್​ ಧವನ್​ ಸಹಿತ 6 ಬ್ಯಾಟ್ಸ್​ಮನ್​ಗಳು ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು.

ಇನ್ನು 212 ರನ್​ಗಳ ಗುರಿ ಪಡೆದ ಮುಂಬೈ ತಂಡ ಕೇವಲ 31.5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪೃಥ್ವಿ ಶಾ 89 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 105 ರನ್​ ಗಳಿಸಿದರೆ, ಇವರಿಗೆ ಸಾಥ್​ ನೀಡಿದ ನಾಯಕ ಶ್ರೇಯಸ್ ಐಯ್ಯರ್​ 39 ಎಸೆತಗಳಲ್ಲಿ 39 ರನ್​, ಸೂರ್ಯಕುಮಾರ್ ಯಾದವ್​ 50 ರನ್ ​ಗಳಿಸಿ ಗೆಲುವಿನ ರೂವಾರಿಯಾದರು.

ನಿನ್ನೆಯಷ್ಟೇ ಭಾರತ ತಂಡಕ್ಕೆ ಆಯ್ಕೆಯಾದ ಖುಷಿಯಲ್ಲಿದ್ದ ಸೂರ್ಯಕುಮಾರ್ ಯಾದವ್​ ಸ್ಫೋಟಕ ಆಟ ತೋರಿದರು. ಅವರು 33 ಎಸೆಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 50 ರನ್​ ಗಳಿಸಿದರು.

ಇದನ್ನು ಓದಿ:ಮುಂಬೈನ 4 ಸ್ಟೇಡಿಯಂ, ಮೊಟೆರಾದಲ್ಲಿ 2021ರ ಐಪಿಎಲ್​​​​ ನಡೆಯುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.