ಮುಂಬೈ: ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದೇ ಹೆಸರಾಗಿರುವ ಮುಂಬೈನ ಪೃಥ್ವಿ ಶಾ ಅವರಿಗೆ ಬಿಸಿಸಿಐ ಹೇರಿದ್ದ ನಿಷೇಧ ಅವಧಿ ಮುಗಿದಿದ್ದು, ಭಾನುವಾರ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ.
ಡೋಪಿಂಗ್ ಪರೀಕ್ಷೆಯಲ್ಲಿ ಪೃಥ್ವಿ ಶಾ ಮಾದಕ ದ್ರವ್ಯ ಸೇವನೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ 8 ತಿಂಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧ ಹೇರಿತ್ತು. ನವೆಂಬರ್ 16ಕ್ಕೆ ಅವರ ನಿಷೇಧದ ಅವಧಿ ಮುಗಿದಿದೆ. ನವೆಂಬರ್ 17ಕ್ಕೆ ಮುಂಬೈ ಟಿ-20 ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
-
I turn 20 today. I assure it will be Prithvi Shaw 2.0 going forward. Thank u for all the good wishes & support. Will be back in action soon. #motivation #hardwork #believe pic.twitter.com/SIwIGxTZaJ
— Prithvi Shaw (@PrithviShaw) November 9, 2019 " class="align-text-top noRightClick twitterSection" data="
">I turn 20 today. I assure it will be Prithvi Shaw 2.0 going forward. Thank u for all the good wishes & support. Will be back in action soon. #motivation #hardwork #believe pic.twitter.com/SIwIGxTZaJ
— Prithvi Shaw (@PrithviShaw) November 9, 2019I turn 20 today. I assure it will be Prithvi Shaw 2.0 going forward. Thank u for all the good wishes & support. Will be back in action soon. #motivation #hardwork #believe pic.twitter.com/SIwIGxTZaJ
— Prithvi Shaw (@PrithviShaw) November 9, 2019
ಎರಡು ದಿನಗಳ ಹಿಂದೆ ಪೃಥ್ವಿ ಶಾ ಕರೆ ಮಾಡಿದಾಗ, ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ದ್ರಾವಿಡ್ ಬಳಿ ತರಬೇತಿ ಪಡೆಯುತ್ತಿರುವುದಾಗಿ ತಿಳಿಸಿದ್ದರು. ತಾನು ಫಿಟ್ ಇದ್ದು, ಕ್ರಿಕೆಟ್ಗೆ ಮರಳಲು ಸಿದ್ಧನಿದ್ದೇನೆ ಎಂದು ಶಾ ತಮ್ಮ ಬಳಿ ತಿಳಿಸಿದ್ದಾರೆ. ನವೆಂಬರ್ 16ರಂದು ಅವರ ನಿಷೇಧ ಅವಧಿ ಮುಗಿಯಲಿದ್ದು, 17ರಂದು ತಂಡ ಸೇರಿಕೊಳ್ಳಲಿದ್ದಾರೆ ಎಂದು ಮುಂಬೈ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಮಿಲಿಂದ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪೃಥ್ವಿ ಭಾರತದ ಪರ 2 ಟೆಸ್ಟ್ ಪಂದ್ಯವಾಡಿದ್ದು, 237 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ. ಇನ್ನು 17 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಡಿದ್ದು, 8 ಶತಕ 8 ಅರ್ಧಶತಕ ಸಹಿತ 1767 ರನ್, 26 ಲಿಸ್ಟ್ ಎ ಪಂದ್ಯಗಳಿಂದ 3 ಶತಕ, 6 ಅರ್ಧಶತ ಸಹಿತ 1045 ರನ್ ಗಳಿಸಿದ್ದಾರೆ.