ನವದೆಹಲಿ : ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಕನ್ನಡಿಗ ಹಾಗೂ ಭಾರತ ತಂಡದ ಮಾಜಿ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಅವರ ಬೌಲಿಂಗ್ ಅನುಕರಣೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕುಂಬ್ಳೆ ನನ್ನ ಬೌಲಿಂಗ್ ಆ್ಯಕ್ಷನ್ಗೆ ತುಂಬಾ ಹತ್ತಿರವಿದ್ದೀರ ಎಂದು ಬುಮ್ರಾ ಬೆನ್ನು ತಟ್ಟಿದ್ದಾರೆ.
ಬುಮ್ರಾ ನೈಜವಾಗಿ ವೇಗದ ಬೌಲರ್, ಅವರು ಯಾರ್ಕರ್ ಸ್ಪೆಷಲಿಸ್ಟ್ ಆಗಿದ್ದಾರೆ. ಆದರೆ, ಶನಿವಾರ ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಅನಿಲ್ ಕುಂಬ್ಳೆಯವರ ಶೈಲಿಯಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದು, ಈ ವಿಡಿಯೋವನ್ನು ಶನಿವಾರ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿತ್ತು.
-
Well done Boom. Pretty close 👍🏽. You are an inspiration to the next generation of young fast bowlers who are imitating your style. Best wishes for the upcoming series.
— Anil Kumble (@anilkumble1074) January 31, 2021 " class="align-text-top noRightClick twitterSection" data="
">Well done Boom. Pretty close 👍🏽. You are an inspiration to the next generation of young fast bowlers who are imitating your style. Best wishes for the upcoming series.
— Anil Kumble (@anilkumble1074) January 31, 2021Well done Boom. Pretty close 👍🏽. You are an inspiration to the next generation of young fast bowlers who are imitating your style. Best wishes for the upcoming series.
— Anil Kumble (@anilkumble1074) January 31, 2021
"ನಾವು ಜಸ್‌ಪ್ರೀತ್ ಬುಮ್ರಾ ಅಪಾಯಕಾರಿ ಯಾರ್ಕರ್ ಮತ್ತು ಬೌನ್ಸರ್‌ಗಳನ್ನು ಎಸೆಯುವುದನ್ನು ನೋಡಿದ್ದೇವೆ. ಆದರೆ, ಈ ವೇಗದ ಬೌಲರ್ನ ಯಾರೂ ನೋಡಿರದ ಹೊಸ ಅವತಾರ ನೋಡಿ. ಬುಮ್ರಾ ಲೆಜೆಂಡರಿ ಅನಿಲ್ ಕುಂಬ್ಳೆ ಅವರ ಬೌಲಿಂಗ್ ಆ್ಯಕ್ಷನ್‌ನ ಅನುಕರಿಸುತ್ತಿದ್ದಾರೆ" ಎಂದು ಬರೆದುಕೊಂಡು ಬಿಸಿಸಿಐ ವಿಡಿಯೋವೊಂದನ್ನು ಶೇರ್ ಮಾಡಿತ್ತು.
ಈ ವಿಡಿಯೋಗೆ ಕರ್ನಾಟಕದ ಲೆಜೆಂಡ್ ಕುಂಬ್ಳೆ ಪ್ರತಿಕ್ರಿಯಿಸಿದ್ದು,"ಚೆನ್ನಾಗಿದೆ ಬುಮ್ರಾ, ನನ್ನ ಬೌಲಿಂಗ್ಗೆ ನೀವು ತುಂಬಾ ಹತ್ತಿರವಿದ್ದೀರಾ.. ನಿಮ್ಮ ಶೈಲಿಯನ್ನು ಅನುಕರಿಸುವ ಮುಂದಿನ ಪೀಳಿಗೆಯ ಯುವ ವೇಗದ ಬೌಲರ್‌ಗಳಿಗೆ ನೀವು ಸ್ಫೂರ್ತಿಯಾಗಿದ್ದೀರಾ.. ಮುಂಬರುವ ಸರಣಿಗೆ ಶುಭಾಶಯಗಳು" ಎಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಇಂಗ್ಲೆಂಡ್‌ನ ಅಸ್ಥಿರ ಟಾಪ್ 3 ಬ್ಯಾಟಿಂಗ್ ಕ್ರಮಾಂಕ.. ಆಂಗ್ಲರ ವಿರುದ್ಧ ಭಾರತವೇ ಬೆಸ್ಟ್ - ಚಾಪೆಲ್