ETV Bharat / sports

ಕೆರಿಬಿಯನ್​ ಪ್ರೀಮಿಯರ್​ ಲೀಗ್​ಗೆ ಪ್ರವೀಣ್​ ತಾಂಬೆ... ಈ ಲೀಗ್​ ಆಡುವ ಮೊದಲ ಭಾರತೀಯ!

author img

By

Published : Jul 7, 2020, 3:46 AM IST

48 ವರ್ಷದ ಪ್ರವೀಣ್​ ತಾಂಬೆ ಕೆರಿಬಿಯನ್​ ಪ್ರೀಮಿಯರ್​ ಲೀಗ್​ಗೆ ಆಯ್ಕೆಯಾಗಿದ್ದು, ಈ ಲೀಗ್​ ಆಡಲಿರುವ ಮೊದಲ ಭಾರತೀಯ ಪ್ಲೇಯರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Pravin Tambe
Pravin Tambe

ಹೈದರಾಬಾದ್​​: ಆಗಸ್ಟ್​​ 18ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿರುವ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 48 ವರ್ಷದ ಪ್ರವೀಣ್​ ತಾಂಬೆ ಅವಕಾಶ ಪಡೆದುಕೊಂಡಿದ್ದು, ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಕೆರಿಬಿಯನ್​ ಪ್ರೀಮಿಯರ್​ ಲೀಗ್​ನ ಆರು ಪ್ರಾಂಚೈಸಿಗಳು ತಮ್ಮ ತಂಡ ಪ್ರಕಟಗೊಳಿಸಿದ್ದು, ಟೀಂ ಇಂಡಿಯಾ ಮಾಜಿ ಲೆಗ್​ ಸ್ಪಿನ್ನರ್​ ಪ್ರವೀಣ್​, ಟ್ರಿನ್‌ಬಾಗೊ ನೈಟ್ ರೈಡರ್ಸ್​ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಬಾಲಿವುಡ್​ ನಟ ಶಾರೂಖ್​ ಖಾನ್​ ಅವರ ಮಾಲೀಕತ್ವದ ತಂಡ ಇದಾಗಿದೆ. ಇದರ ಜತೆಗೆ ಈ ತಂಡದಲ್ಲಿ ರಶೀದ್ ಖಾನ್, ಮಾರ್ಕಸ್ ಸ್ಟೋಯ್ನಿಸ್, ರಾಸ್ ಟೇಲರ್​ ಕೂಡ ಆಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡಕ್ಕೆ ಆಯ್ಕೆಯಾಗಿದ್ದ ತಾಂಬೆ, ಅಬುಧಾಬಿಯಲ್ಲಿ ನಡೆದ ಟಿ-20 ಲೀಗ್​ನಲ್ಲಿ ಭಾಗಿಯಾಗಿದ್ದರಿಂದ ಅವರನ್ನ ಬಿಸಿಸಿಐ ಅಮಾನತು ಮಾಡಿತು.

ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್​ನಿಂದ ಇವರು ನಿವೃತ್ತಿ ಪಡೆದುಕೊಂಡಿದ್ದು, ಈ ಲೀಗ್​ನಲ್ಲಿ ಆಡುವುದಾದರೆ ಬಿಸಿಸಿಐನಿಂದ ನೋ ಅಬ್ಜೆಕ್ಷನ್​ ಪತ್ರ ಪಡೆದುಕೊಳ್ಳಬೇಕಾಗಿದೆ.

ಈ ಹಿಂದೆ ಕೂಡ ಕೆರಿಬಿಯನ್ ಪ್ರೀಮಿಯರ್ ಲೀಗ್ ‌(ಸಿಪಿಎಲ್​) ನ ಮುಂದಿನ ಆವೃತ್ತಿಗೆ ಟ್ರಿನ್‌ ಬಾಗೊ ನೈಟ್ ರೈಡರ್ಸ್ (ಟಿಕೆಆರ್​) ತಂಡ ನನ್ನನ್ನು ಆಯ್ಕೆ ಮಾಡಿದೆ ಎಂದು ಹೇಳಿಕೊಂಡಿದ್ದರು. ಆದರೆ ತಾಂಬೆ ಹೇಳಿಕೆಯನ್ನು ಸಿಪಿಎಲ್​ ಸಂಘಟಕರು ಮಾತ್ರವಲ್ಲದೇ ಫ್ರ್ಯಾಂಚೈಸಿ ಕೂಡ ಅಲ್ಲಗಳೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.