ನವದೆಹಲಿ: ನವೆಂಬರ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕೆ ಎರಡೂ ದೇಶಗಳ ಪ್ರಧಾನಿಗಳಿಗೆ ಆಹ್ವಾನ ನೀಡಿದೆ.
ನವೆಂಬರ್ 22 ರಂದು ಭಾರತ ಹಾಗೂ ಬಾಂಗ್ಲದೇಶಗಳ ನಡುವೆ ಈಡನ್ ಗಾರ್ಡನ್ನಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಹ್ವಾನ ನೀಡಿದೆ.
ಬಾಂಗ್ಲಾದೇಶ ತಂಡ ಇದೇ ಮೊದಲ ಬಾರಿಗೆ ಈಡನ್ ಗಾರ್ಡನ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವುದರಿಂದ ಈ ಐಸತಿಹಾಸಿಕ ಪಂದ್ಯದ ನೆನಪಿಗಾಗಿ ಎರಡೂ ದೇಶಗಳ ಪ್ರಧಾನಿಗಳಿಗೆ ಆಹ್ವಾನ ನೀಡಿ ಪತ್ರ ಬರೆಯಲಾಗಿದೆ ಎಂದು ಸಿಎಬಿ ತಿಳಿಸಿದೆ.
2016ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ವೇಳೆಯಲ್ಲೂ ಸಿಎಬಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ಅಹ್ವಾನಿಸಿತ್ತು. ಅದೇ ಪಂದ್ಯಕ್ಕೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಹ್ವಾನಿಸಿತ್ತು.
2011ರ ವಿಶ್ವಕಪ್ನಲ್ಲೂ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕಿಸ್ತಾನ ಪ್ರಧಾನಿ ಯೂಸಫ್ ರಾಜಾ ಗಿಲಾನಿ ಸೇರಿದಂತೆ ಹಲವಾರು ಗಣ್ಯರು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.