ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್.. ಮಿಥಾಲಿ ರಾಜ್​ ಸಾಧನೆ ಶ್ಲಾಘಿಸಿದ ಮೋದಿ

ಮಿಥಾಲಿ ಜೊತೆಗೆ ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್​ ವಿಶ್ವಕಪ್​ನಲ್ಲಿ ಭಾಗವಹಿಸಿ 30 ಪದಕಗಳನ್ನು ಗೆದ್ದಿರುವ ಮಹಿಳಾ ಮತ್ತು ಪುರುಷ ಶೂಟರ್​ಗಳು, ಬಿಡಬ್ಲ್ಯುಎಫ್​ನ ಸ್ವಿಸ್ ಓಪನ್​ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ ಸಿಂಧು ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ..

ಮಿಥಾಲಿ ರಾಜ್​ ಸಾಧನೆಯನ್ನು ಶ್ಲಾಘಿಸಿದ ಮೋದಿ
ಮಿಥಾಲಿ ರಾಜ್​ ಸಾಧನೆಯನ್ನು ಶ್ಲಾಘಿಸಿದ ಮೋದಿ
author img

By

Published : Mar 28, 2021, 8:28 PM IST

ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10,000 ರನ್​ ಬಾರಿಸಿದ ವಿಶ್ವದ ಪ್ರಥಮ ಮಹಿಳಾ ಕ್ರಿಕೆಟರ್ ಆಗಿರುವ ಭಾರತ ತಂಡದ ನಾಯಕಿ ಮಿಥಾಲಿ ರಾಜ್​ ಸಾಧನೆಯನ್ನು ಪ್ರಧಾನಿ ಮೋದಿ ತಮ್ಮ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.

ಭಾನುವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ಭಾರತ ತಂಡದ ಆಟಗಾರ್ತಿ ಮಿಥಾಲಿ ರಾಜ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟರ್‌ ಎನಿಸಿದ್ದಾರೆ. ಅವರ ಈ ಸಾಧನೆಗೆ ಅಭಿನಂಧನೆಗಳು ಎಂದು ಮನ್​​ ಕಿ ಬಾತ್​ನ 75ನೇ ಎಪಿಸೋಡ್​ನಲ್ಲಿ ತಿಳಿಸಿದ್ದಾರೆ.

"ಅವರು(ಮಿಥಾಲಿ) ಏಕದಿನದ ಕ್ರಿಕೆಟ್​ನಲ್ಲೂ 7 ಸಾವಿರ ರನ್ ಗಳಿಸಿದ ಏಕೈಕ ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿ. ಮಹಿಳಾ ಕ್ರಿಕೆಟ್ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರು ತಮ್ಮ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಪರಿಶ್ರಮ ಮತ್ತು ಯಶಸ್ಸು ಮಹಿಳಾ ಕ್ರಿಕೆಟಿಗರಿಗೆ ಮಾತ್ರವಲ್ಲದೆ ಪುರುಷ ಕ್ರಿಕೆಟಿಗರಿಗೂ ಸ್ಫೂರ್ತಿಯಾಗಿದೆ" ಎಂದು ಅವರು ಹೇಳಿದ್ದಾರೆ.

ಮಿಥಾಲಿ ಜೊತೆಗೆ ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್​ ವಿಶ್ವಕಪ್​ನಲ್ಲಿ ಭಾಗವಹಿಸಿ 30 ಪದಕಗಳನ್ನು ಗೆದ್ದಿರುವ ಮಹಿಳಾ ಮತ್ತು ಪುರುಷ ಶೂಟರ್​ಗಳು, ಬಿಡಬ್ಲ್ಯುಎಫ್​ನ ಸ್ವಿಸ್ ಓಪನ್​ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ ಸಿಂಧು ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ:ISSF​ ವಿಶ್ವಕಪ್: ಟ್ರ್ಯಾಪ್ ವಿಭಾಗದಲ್ಲಿ ಪುರುಷ, ಮಹಿಳಾ ತಂಡಗಳಿಗೆ​ ಸ್ವರ್ಣ ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.