ಶಾರ್ಜಾ: ಫಾಫ್ ಡು ಪ್ಲೆಸಿಸ್, ರಾಯುಡು ಹಾಗೂ ಜಡೇಜಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 179 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡ ಖಾತೆ ತೆರೆಯುವ ಮುನ್ನವೇ ಆರಂಭಿಕ ಸ್ಯಾಮ್ ಕರ್ರನ್ ವಿಕೆಟ್ ಕಳೆದುಕೊಂಡಿತು. ಆದರೆ ವಾಟ್ಸನ್ ಮತ್ತು ಪ್ಲೆಸಿಸ್ 2ನೇ ವಿಕೆಟ್ಗೆ 87 ರನ್ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ವಾಟ್ಸನ್ 28 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 36 ರನ್ಗಳಿಸಿ ಔಟಾದರು.
-
Innings Break!
— IndianPremierLeague (@IPL) October 17, 2020 " class="align-text-top noRightClick twitterSection" data="
An unbeaten 50-run partnership between @RayuduAmbati & @imjadeja at the back end of the innings, propels #CSK to a total of 179/4.
Live - https://t.co/LC2biyWd5Z #Dream11IPL pic.twitter.com/Eh2sGzp2j4
">Innings Break!
— IndianPremierLeague (@IPL) October 17, 2020
An unbeaten 50-run partnership between @RayuduAmbati & @imjadeja at the back end of the innings, propels #CSK to a total of 179/4.
Live - https://t.co/LC2biyWd5Z #Dream11IPL pic.twitter.com/Eh2sGzp2j4Innings Break!
— IndianPremierLeague (@IPL) October 17, 2020
An unbeaten 50-run partnership between @RayuduAmbati & @imjadeja at the back end of the innings, propels #CSK to a total of 179/4.
Live - https://t.co/LC2biyWd5Z #Dream11IPL pic.twitter.com/Eh2sGzp2j4
ವಾಟ್ಸನ್ ಔಟಾದ ನಂತರ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಪ್ಲೆಸಿಸ್ 47 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 58 ರನ್ಗಳಿಸಿ ಔಟಾದರು. ನಾಯಕ ಧೋನಿ 3 ರನ್ಗಳಿಸಿ ಬಂದಷ್ಟೇ ವೇಗವಾಗಿ ವಾಪಸ್ ತೆರಳಿದರು.
ಆದರೆ 4ನೇ ವಿಕೆಟ್ಗೆ ಜೊತೆಯಾದ ರಾಯುಡು ಮತ್ತು ಜಡೇಜಾ ಡೆಲ್ಲಿ ಬೌಲರ್ಗಳನ್ನ ಬೆಂಡೆತ್ತಿದರು. ಈ ಜೋಡಿ 21 ಎಸೆತಗಳಲ್ಲಿ 50 ರನ್ ದೋಚಿತು. ರಾಯಡು 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 45 ರನ್ಗಳಿಸಿದರೆ, ಜಡೇಜಾ 13 ಎಸೆತಗಳಲ್ಲಿ 4 ಸಿಕ್ಸರ್ಗಳ ಸಹಿತ 33 ರನ್ ರನ್ ಸಿಡಿಸಿದರು.
ಒಟ್ಟಾರೆ 20 ಓವರ್ಗಳಲ್ಲಿ ಸಿಎಸ್ಕೆ 4 ವಿಕೆಟ್ ಕಳೆದುಕೊಂಡು 179 ರನ್ಗಳಿಸಿತು.
ಡೆಲ್ಲಿ ಪರ ತುಷಾರ್ ದೇಶಪಾಂಡೆ 39ಕ್ಕೆ 1, ರಬಾಡ 33ಕ್ಕೆ 1 ಹಾಗೂ ನಾರ್ಟ್ಜ್ 44ಕ್ಕೆ 2 ವಿಕೆಟ್ ಪಡೆದರು.