ಮುಂಬೈ: ಭಾರತ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವಾಡುತ್ತಿದ್ದು, ಇದೇ ಮೊದಲ ಬಾರಿಗೆ ಪಿಂಕ್ ಬಾಲ್ನಲ್ಲಿ ಕಾದಾಡಲು ಸಿದ್ಧವಾಗುತ್ತಿದೆ.
ಟೆಸ್ಟ್ ಪಂದ್ಯವಾಡುವ 12 ದೇಶಗಳಲ್ಲಿ ಈಗಾಗಲೇ 8 ರಾಷ್ಟ್ರಗಳು ಪಿಂಕ್ಬಾಲ್ನಲ್ಲಿ ಆಡಿವೆ. ನವೆಂಬರ್ 22 ರಂದು ಈಡನ್ ಗಾರ್ಡನ್ನಲ್ಲಿ ಡೇ ಆ್ಯಂಡ್ ನೈಟ್ ಟೆಸ್ಟ್ನಲ್ಲಿ ಆಡು ಮೂಲಕ ಭಾರತ ಮತ್ತು ಬಾಂಗ್ಲಾದೇಶ ಆ ಸಾಲಿಗೆ ಸೇರಲಿವೆ.
ಡೇ ಆ್ಯಂಡ್ ನೈಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತಿದ್ದು, ಇದುವರೆಗೆ ನಡೆದಿರುವ ಪಿಂಕ್ ಬಾಲ್ ಟೆಸ್ಟ್ಗಳಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ. ಆಸೀಸ್ ಇದುವರೆಗೆ ಆಡಿರುವ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಎಲ್ಲಾ ಪಂದ್ಯಗಳೂ ತವರಿನಲ್ಲೇ ನಡೆದಿದ್ದು, 3 ಬ್ರಿಸ್ಬೇನ್ನಲ್ಲಿ, ಎರಡು ಅಡಿಲೇಡ್ನಲ್ಲಿ ಡೇ ಆ್ಯಂಡ್ ನೈಟ್ ಟೆಸ್ಟ್ ಪಂದ್ಯಗಳನ್ನಾಡಿದೆ. ಆಸೀಸ್ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದೆ.
ಶ್ರೀಲಂಕಾ 3 ಪಿಂಕ್ಬಾಲ್ ಟೆಸ್ಟ್ನಲ್ಲಿ 2 ರಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಹಾಗೂ ವಿಂಡೀಸ್ ವಿರುದ್ಧ ಗೆಲುವು ಸಾಧಿಸಿದರೆ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಇನ್ನು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ.
ಇದುವರೆಗೂ 3 ಡೇ ಆ್ಯಂಡ್ ನೈಟ್ ಪಂದ್ಯಗಳನ್ನಾಡಿರುವ ವೆಸ್ಟ್ ಇಂಡೀಸ್ ಎಲ್ಲಾ ಪಂದ್ಯಗಳಲ್ಲೂ ಸೋಲು ಕಂಡಿದೆ.