ಹಂಬಂಟೋಟ: ಶ್ರೀಲಂಕಾದ ಆಲ್ರೌಂಡರ್ ತಿಸರಾ ಪೆರೆರಾ ಲಂಕಾ ಪ್ರೀಮಿಯರ್ ಲೀಗ್ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಜಫ್ನಾ ಸ್ಟಾಲಿಯನ್ಸ್ ತಂಡದ ನಾಯಕನಾಗಿರುವ ಪೆರೆರಾ ಇಂದು ದಂಬುಲಾ ವೀಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಕೇವಲ 44 ಎಸೆತಗಳಲ್ಲಿ 97 ರನ್ ಸಿಡಿಸುವ ಮೂಲಕ ಈ ಕ್ರಮಾಂದಲ್ಲಿ ಗರಷ್ಠ ರನ್ ಸಿಡಿಸಿದ ಶ್ರೀಲಂಕಾದ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದಾರೆ. ಪೆರೆರಾ ಇನ್ನಿಂಗ್ಸ್ನಲ್ಲಿ 7 ಸಿಕ್ಸರ್ಸ್ ಮತ್ತು 8 ಬೌಂಡರಿ ಸೇರಿವೆ.
ಟಿ-20 ಕ್ರಿಕೆಟ್ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಸಿಡಿಸಿದ ವಿಶ್ವದ 2ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಮೊದಲು ವಿಂಡೀಸ್ ಸ್ಫೋಟಕ ಆಲ್ರೌಂಡರ್ ರಸೆಲ್ 7ನೇ ಕ್ರಮಾಂಕದಲ್ಲಿ 49 ಎಸೆತಗಳಲ್ಲಿ 121 ರನ್ ಗಳಿಸಿ ದಾಖಲೆ ಬರೆದಿದ್ದರು.
ಇನ್ನು ತಂಡದ ಉಳಿದ ಆಟಗಾರರು 30 ರನ್ ಗಳಿಸಿದ ಪಂದ್ಯದಲ್ಲಿ ಅತಿ ಹೆಚ್ಚು ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಪೆರೆರಾ ಪಾಲಾಗಿದೆ. ಅವರು 97 ರನ್ ಗಳಿಸಿದರೆ, 2ನೇ ಗರಿಷ್ಠ ಮೊತ್ತ 29 ಆಗಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 2019ರಲ್ಲಿ ಕೆಕೆಆರ್ ವಿರುದ್ಧ 91 ರನ್ ಹಾಗೂ ಮಾರ್ಕ್ ಎಲ್ಹಾಮ್ 2004ರಲ್ಲಿ 91 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.