ETV Bharat / sports

ಏಷ್ಯಾಕಪ್​ ರದ್ದತಿ ಬಗ್ಗೆ ನಮಗೆ ಮಾಹಿತಿಯಿಲ್ಲ, ಎಸಿಸಿಯ ನಿರ್ಧಾರಕ್ಕೆ ಕಾಯುತ್ತಿದ್ದೇವೆ: ಪಿಸಿಬಿ

ಬುಧವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2020ರ ಏಷ್ಯಾಕಪ್​ ರದ್ದಾಗಿದೆ ಎಂದು ತಿಳಿಸಿದ್ದರು.

ಏಷ್ಯಾಕಪ್​ 2020
ಏಷ್ಯಾಕಪ್​ 2020
author img

By

Published : Jul 9, 2020, 12:58 PM IST

ಲಾಹೋರ್: ಏಷ್ಯಾಕಪ್ 2020 ರದ್ದಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರವಷ್ಟೇ ಘೋಷಿಸಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಈ ಬಗ್ಗೆ ನಮಗೇನೂ ತಿಳಿದಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ನ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದೆ.

2020 ರ ಏಷ್ಯಾಕಪ್​ ಆತಿಥ್ಯವನ್ನು ಪಾಕಿಸ್ತಾನ ವಹಿಸಬೇಕಿತ್ತು. ಟೂರ್ನಿ ಈಗಾಗಲೇ ನಿರ್ಧಾರವಾದಂತೆ ಸೆಪ್ಟೆಂಬರ್​-ಅಕ್ಟೋಬರ್​ ಮಾಹೆಯಲ್ಲಿ ಯುಎಇನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿಯಿಂದ ಶ್ರೀಲಂಕಾದಲ್ಲಿ ನಡೆಸಲು ಪಾಕಿಸ್ತಾನ ನಿರ್ಧರಿದೆ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ನಿನ್ನೆ ಇನ್ಸ್ಟಾಗ್ರಾಮ್​ ಲೈವ್​ ಸಂದರ್ಶನದಲ್ಲಿ ಮಾತನಾಡುತ್ತಾ ಏಷ್ಯಾಕಪ್​ ರದ್ದಾಗಿದೆ ಎಂಬ ಶಾಕಿಂಗ್​ ಹೇಳಿಕೆ ನೀಡಿದ್ದರು.

Ganguly
ಸೌರವ್​ ಗಂಗೂಲಿ

ಈ ನಡುವೆ, ಏಷ್ಯಾಕಪ್​ ಟಿ20 ರದ್ದಾಗಿರುವ ಯಾವುದೇ ವಿಷಯವನ್ನು ತಿಳಿದಿಲ್ಲ ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.