ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾನೂನು ಸಲಹೆಗಾರ ತಫಝಲ್ ರಿಜ್ವಿ ಪಿಸಿಬಿ ಮತ್ತು ಪಿಸಿಬಿ ಕಾನೂನು ಸಲಹಾ ಸಮಿತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಮಾನನಷ್ಟ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.
ಪ್ರತಿನಿತ್ಯದ ಕ್ರಿಕೆಟ್ಗೆ ಸಂಬಂಧಸಿದ ವಿಚಾರಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಶ್ಲೇಷಣೆ ಹಾಗೂ ಅಭಿಪ್ರಾಯ ಮಂಡಿಸುವ ಅಖ್ತರ್ ನಿನ್ನೆ ಉಮರ್ ಅಕ್ಮಲ್ಗೆ ನಿಷೇಧದ ಶಿಕ್ಷೆ ವಿಧಿಸಿದ್ದರ ಬಗ್ಗೆ ಮಾತನಾಡುವ ಭರದಲ್ಲಿ ಪಿಸಿಬಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಪಾಕಿಸ್ತಾನದಲ್ಲಿ ಮ್ಯಾಚ್ ಫಿಕ್ಸಿಂಗ್ ಅನ್ನು ಕ್ರಿಮಿನಲ್ ಪ್ರಕರಣವಾಗಿ ಮಾಡುತ್ತಿಲ್ಲ. ಹಾಗಾಗಿ, ಕ್ರಿಕೆಟ್ ಬೋರ್ಡ್‌ನ ಕಾನೂನು ಸಲಹಾ ಮಂಡಳಿಯನ್ನು ಅಸಮರ್ಥರೆಂದು ಜರೆದಿದ್ದರು.
ಅಖ್ತರ್ ಸಾಮಾಜಿಕ ಜಾಲತಾಣದಲ್ಲಿ ಪಿಸಿಬಿ ವಿರುದ್ಧ ಬಳಸಿರುವ ಪದಗಳಿಂದ ಪಿಸಿಬಿ ಕಾನೂನು ಸಮಿತಿ ಹಾಗೂ ಸಲಹಾ ಸಮಿತಿ ಬೇಸರ ವ್ಯಕ್ತಪಡಿಸಿದೆ. ಅವರು ಉಪಯೋಗಿಸಿರುವ ಪದ ಸೂಕ್ತ, ಸಮಂಜಸವಲ್ಲ. ಇದನ್ನು ನಾಗರೀಕ ಸಮಾಜದಲ್ಲಿ ಕ್ಷಮಿಸಲಾಗುವುದಿಲ್ಲ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.