ಹೈದರಾಬಾದ್: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಕೆಲ ದಿನಗಳ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬರೋಬ್ಬರಿ 15.5 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ.
ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿರುವ ಪ್ಲೇಯರ್ ಎಂಬ ದಾಖಲೆ ಸಹ ಇವರು ಬರೆದಿದ್ದು, ಇದೀಗ ತಾವು ಪಡೆದುಕೊಂಡಿರುವ ಇಷ್ಟೊಂದು ಹಣದಲ್ಲಿ ಅವರ ಗರ್ಲ್ಫ್ರೆಂಡ್ ಬೆಕಿ ಬೋಸ್ಟನ್ ಏನು ಮಾಡಲಿದ್ದಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ತಮಗೆ ಸಿಕ್ಕಿರುವ ಹಣದಲ್ಲಿ ಹೆಚ್ಚು ನಾಯಿ ಮರಿ ಹಾಗೂ ಆಟಿಕೆ ಸಾಮಾನು ಪಡೆದುಕೊಳ್ಳಲು ಇಷ್ಟಪಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಗೆ ಉಳಿದಿದ್ದ ಈ ಪ್ಲೇಯರ್ ಇದೀಗ ಮತ್ತೊಮ್ಮೆ ಐಪಿಎಲ್ ತಂಡ ಸೇರಿಕೊಳ್ಳಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ 1 ಬೌಲರ್ ಎಂಬ ದಾಖಲೆ ನಿರ್ಮಾಣ ಮಾಡಿರುವ ಈ ಪ್ಲೇಯರ್ ಐಪಿಎಲ್ನಲ್ಲಿ ಇಲ್ಲಿಯವರೆಗೆ 16 ಪಂದ್ಯಗಳಿಂದ 17 ವಿಕೆಟ್ ಪಡೆದುಕೊಂಡಿದ್ದಾರೆ.