ETV Bharat / sports

2019ರಲ್ಲಿ 'ಅರ್ಧಶತಕ' ಪೂರೈಸಿದ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​ - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಗರಿಷ್ಟ ವಿಕೆಟ್​

ಪಾಕಿಸ್ತಾನದ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಪ್ಯಾಟ್​ ಕಮ್ಮಿನ್ಸ್​, ಮೊಹಮ್ಮದ್​ ಅಬ್ಬಾಸ್​ ವಿಕೆಟ್​ ಪಡೆಯುವ ಮೂಲಕ 2019ರಲ್ಲಿ ವಿನೂತನ ಸಾಧನೆ ಮಾಡಿದ್ದಾರೆ. ​

Pat Cummins  50 wickets
Pat Cummins 50 wickets
author img

By

Published : Dec 1, 2019, 4:03 PM IST

ಅಡಿಲೇಡ್​: ಆಸ್ಟ್ರೇಲಿಯಾದ ತಂಡದ ಪ್ಯಾಟ್​ ಕಮ್ಮಿನ್ಸ್​ 2019ರಲ್ಲಿ 50 ವಿಕೆಟ್​ ಪಡೆದ ಮೊದಲ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಪಾಕಿಸ್ತಾನದ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಪ್ಯಾಟ್​ ಕಮ್ಮಿನ್ಸ್​ ಮೊಹಮ್ಮದ್​ ಅಬ್ಬಾಸ್​ ವಿಕೆಟ್​ ಪಡೆಯುವ ಮೂಲಕ 2019ರಲ್ಲಿ ಟೆಸ್ಟ್ ಕ್ರಿಕೆಟ್​ನ 50 ವಿಕೆಟ್​ ಸಾಧನೆ ಮಾಡಿದರು.

ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 3 ವಿಕೆಟ್ ಪಡೆಯುವ ಮೂಲಕ ಪ್ರಸ್ತುತ ವರ್ಷದಲ್ಲಿ ಅವರು 51 ವಿಕೆಟ್​ ಪಡೆದಂತಾಗಿದೆ. ಕಮ್ಮಿನ್ಸ್​ ನಂತರದ ಸ್ಥಾನದಲ್ಲಿ 38 ವಿಕೆಟ್​ ಪಡೆದಿರುವ ಇಂಗ್ಲೆಂಡ್​ನ ಸ್ಟುವರ್ಟ್​ ಬ್ರಾಡ್​ ಇದ್ದಾರೆ.

ಭಾರತದ ಮೊಹಮ್ಮದ್​ ಶಮಿ 33 ವಿಕೆಟ್​ ಪಡೆದು ಟಾಪ್‌ ಬೌಲರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ಕ್​ 30, ನಾಥನ್​ ಲಿಯಾನ್ 30, ಹೆಜಲ್​ವುಡ್​ 29 ವಿಕೆಟ್​ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಟೆಸ್ಟ್ ವಿಶ್ವ​ ಚಾಂಪಿಯನ್​ಶಿಪ್​ನಲ್ಲೂ ಕಮ್ಮಿನ್ಸ್​ 7 ಪಂದ್ಯಗಳಿಂದ 37 ವಿಕೆಟ್​ ಪಡೆದು ಅಗ್ರ ಶ್ರೇಯಾಂಕದಲ್ಲಿದ್ದಾರೆ. ಭಾರತದ ಶಮಿ 7 ಪಂದ್ಯಗಳಿಂದ 31 ವಿಕೆಟ್​ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಹೆಜಲ್​ವುಡ್​ 29, ಇಶಾಂತ್​ ಶರ್ಮಾ 25 ಹಾಗು ಉಮೇಶ್ ಯಾದವ್​ ಕೇವಲ 4 ಪಂದ್ಯಗಳಿಂದ 23 ವಿಕೆಟ್​ ಪಡೆದು 5ನೇ ಸ್ಥಾನದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.