ETV Bharat / sports

ಮಿಂಚಿದ ತೆವಾಟಿಯಾ: ಹೈದರಾಬಾದ್​ ವಿರುದ್ಧ ರಾಜಸ್ಥಾನ್‌ಗೆ 5 ವಿಕೆಟ್​ಗಳ ರೋಚಕ ಜಯ

159 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್​ 78 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ತೆವಾಟಿಯಾ ಹಾಗೂ ಪರಾಗ್ 6ನೇ ವಿಕೆಟ್​​ಗೆ ಮುರಿಯದ 85 ರನ್​ಗಳ ಜೊತೆಯಾಟ ನಡೆಸಿ ರಾಜಸ್ಥಾನ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

author img

By

Published : Oct 11, 2020, 7:53 PM IST

ಹೈದರಾಬಾದ್​ ವಿರುದ್ಧ ರಾಜಸ್ಥಾನ್ 5 ವಿಕೆಟ್​ಗಳ ರೋಚಕ ಜಯ
ರಾಹುಲ್​ ತೆವಾಟಿಯಾ-ಪರಾಗ್

ದುಬೈ: ರಾಹುಲ್ ತೆವಾಟಿಯಾ ಹಾಗೂ ರಿಯಾನ್ ಪರಾಗ್ ಅವರ ಅಮೋಘ ಆಟದ ಪರಿಣಾಮ ರಾಜಸ್ಥಾನ್‌ ತಂಡ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ಗೆಲುವಿನ ಹಾದಿಗೆ ಮರಳಿದೆ.

159 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್​ 78 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ತೆವಾಟಿಯಾ ಹಾಗೂ ಪರಾಗ್ 6ನೇ ವಿಕೆಟ್​​ಗೆ ಮುರಿಯದ 85 ರನ್​ಗಳ ಜೊತೆಯಾಟ ನಡೆಸಿ ರಾಜಸ್ಥಾನ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಆರಂಭಿಕರಾಗಿ ಕಣಕ್ಕಿಳಿದ ಬೆನ್​ ಸ್ಟೋಕ್ಸ್​(5), ಸ್ಟಿವ್​ ಸ್ಮಿತ್​ 5, ಬಟ್ಲರ್​ 16, ಸಾಮ್ಸನ್​ 26, ಉತ್ತಪ್ಪ 18 ರನ್​ಗಳಿಸಿ ಬೇಗನೆ ವಿಕೆಟ್​ ಒಪ್ಪಿಸಿದರು.

ಆದರೆ ತಾಳ್ಮೆಯಿಂದ ಜೊತೆಯಾಟ ಶುರು ಮಾಡಿದ ಈ ಜೋಡಿ ಒಂದೆರೆಡು ಓವರ್​ಗಳವರೆಗೆ ಬೌಂಡರಿ ತಂಟೆಗೆ ಹೋಗದೆ ಸಿಂಗಲ್ಸ್​ ರನ್ ತೆಗೆದುಕೊಂಡು ವಿಕೆಟ್ ಉಳಿಸಿಕೊಂಡರು. ಕೊನೆಯ 30 ಎಸೆತಗಳಲ್ಲಿ ಗೆಲುವಿಗೆ 65 ರನ್​ಗಳ ಅಗತ್ಯವಿತ್ತು.

16ನೇ ಓವರ್​ನಿಂದ ಚಾರ್ಜ್​ ಮಾಡಿದ ಈ ಜೋಡಿ, ಖಲೀಲ್​ ಓವರ್​ನಲ್ಲಿ 11, ನಂತರ ಸಂದೀಪ್ ಎಸೆದ 17ನೇ ಓವರ್​ನಲ್ಲಿ 18, 18ನೇ ಓವರ್​ನಲ್ಲಿ ರಶೀದ್ ಖಾನ್​ಗೆ 14, ಯಾರ್ಕರ್​ ಕಿಂಗ್​ ಎಂದೇ ಹೆಸರುವಾಸಿಯಾಗಿರುವ ನಟರಾಜನ್​ ಎಸೆದ 19ನೇ ಓವರ್​ನಲ್ಲಿ 14 ರನ್​ ಚಚ್ಚಿದರು. ಕೊನೆಯ ಓವರ್​ನಲ್ಲಿ ಗೆಲುವಿಗೆ ಅಗತ್ಯವಿದ್ದ 8 ರನ್​ಗಳನ್ನು ಇನ್ನೂ ಒಂದು ಎಸೆತವಿರುವಂತೆಯೇ ಸಿಡಿಸಿ ತಂಡಕ್ಕೆ ಟೂರ್ನಿಯಲ್ಲಿ 3ನೇ ಗೆಲುವು ತಂದುಕೊಟ್ಟರು.

ಪರಾಗ್ 26 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್​ ಸಹಿತ 42 ರನ್​ಗಳಿಸಿದರೆ, ತೆವಾಟಿಯಾ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

ಎಸ್​ಆರ್​ಹೆಚ್​ ಪರ ಖಲೀಲ್ ಅಹ್ಮದ್​ 2 ಹಾಗೂ ರಶೀದ್​ ಖಾನ್ 2 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡ ಮನೀಶ್ ಪಾಂಡೆ 54 ಹಾಗೂ ವಾರ್ನರ್​ 48 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್​ಗಳಿಸಿತ್ತು.

ಟೂರ್ನಿಯಲ್ಲಿ ಬೆಸ್ಟ್ ಬೌಲರ್​ಗಳೆಂದರೆ ಖ್ಯಾತರಾಗಿದ್ದ ರಶೀದ್​ ಖಾನ್​ ಓವರ್​ನಲ್ಲಿ ಹ್ಯಾಟ್ರಿಕ್​ ಬೌಂಡರಿ ಹಾಗೂ ನಟರಾಜನ್​ ಓವರ್​ನಲ್ಲಿ ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಸಹಿತ 14 ರನ್​ಗಳಿಸಿದ ತೆವಾಟಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.