ಚೆನ್ನೈ: ಭಾರತ ತಂಡದ ಆದಾರ ಸ್ಥಂಭಗಳಾದ ರೋಹಿತ್ ಶರ್ಮಾ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ 288 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ಕೇವಲ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಅದೇ ಓವರ್ನಲ್ಲಿ ಕೊಹ್ಲಿಯೂ ಕೂಡ 4 ರನ್ಗಳಿಸಿ ಕಾಟ್ರೆಲ್ ಎಸೆದ ಅದ್ಭುತ ಎಸೆತವನ್ನು ಗುರುತಿಸುವಲ್ಲಿ ವಿಫಲವಾಗಿ ಕ್ಲೀನ್ ಬೌಲ್ಡ್ ಆದರು.
ಈ ಹಂತದಲ್ಲಿ ತಾಳ್ಮೆಗೆ ಒತ್ತು ನೀಡಿದ ಉಪನಾಯಕ ರೋಹಿತ್ ಶರ್ಮಾ ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಜೊತೆಗೂಡಿ 65 ರನ್ಗಳ ಜೊತೆಯಾಟ ನಡೆಸಿದರು. 56 ಎಸೆತಗಳಲ್ಲಿ 6 ಬೌಂಡರಿ ಸಹಿತ 36 ರನ್ಗಳಿಸಿದ್ದ ರೋಹಿತ್ ಶರ್ಮಾ ಅಲ್ಜಾರಿ ಜೋಸೆಪ್ ಬೌಲಿಂಗ್ನಲ್ಲಿ ಪೊಲಾರ್ಡ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
-
Innings Break!#TeamIndia post a total of 287/8 on the board. Will the bowlers defend the target?#INDvWI pic.twitter.com/M3cK7miq0N
— BCCI (@BCCI) December 15, 2019 " class="align-text-top noRightClick twitterSection" data="
">Innings Break!#TeamIndia post a total of 287/8 on the board. Will the bowlers defend the target?#INDvWI pic.twitter.com/M3cK7miq0N
— BCCI (@BCCI) December 15, 2019Innings Break!#TeamIndia post a total of 287/8 on the board. Will the bowlers defend the target?#INDvWI pic.twitter.com/M3cK7miq0N
— BCCI (@BCCI) December 15, 2019
ರೋಹಿತ್ ವಿಕೆಟ್ ಪತನದ ನಂತರ ಕ್ರೀಸ್ಗೆ ಬಂದ ಪಂತ್ ಐಪಿಎಲ್ ತಂಡದ ಸಹ ಆಟಗಾರ ಅಯ್ಯರ್ ಜೊತೆಗೂಡಿ ಅದ್ಭುತ ಬ್ಯಾಟಿಂಗ್ ನಡೆಸಿ 4ನೇ ವಿಕೆಟ್ಗೆ 114 ರನ್ ಸೇರಿಸಿದರು. ಅಯ್ಯರ್ 88 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 70 ರನ್ಗಳಿಸಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದರು. ಪಂತ್ 69 ಎಸೆತಗಳಲ್ಲಿ 1 ಸಿಕ್ಸರ್ ,7 ಬೌಂಡರಿ ಸಹಾಯದಿಂದ 71 ರನ್ಗಳಿಸಿ ಪೊಲಾರ್ಡ್ಗೆ ವಿಕೆಟ್ ಒಪ್ಪಿಸಿದರು.
-
India finish on 288/8, thanks to 70 from Iyer and 71 from Pant.
— ICC (@ICC) December 15, 2019 " class="align-text-top noRightClick twitterSection" data="
Sheldon Cottrell finished with figures of 2/46 including three maidens, and the wicket of Virat Kohli 👏 #INDvWI | FOLLOW 👇 https://t.co/9QkJ4D8HOy pic.twitter.com/hNtEQEWxKI
">India finish on 288/8, thanks to 70 from Iyer and 71 from Pant.
— ICC (@ICC) December 15, 2019
Sheldon Cottrell finished with figures of 2/46 including three maidens, and the wicket of Virat Kohli 👏 #INDvWI | FOLLOW 👇 https://t.co/9QkJ4D8HOy pic.twitter.com/hNtEQEWxKIIndia finish on 288/8, thanks to 70 from Iyer and 71 from Pant.
— ICC (@ICC) December 15, 2019
Sheldon Cottrell finished with figures of 2/46 including three maidens, and the wicket of Virat Kohli 👏 #INDvWI | FOLLOW 👇 https://t.co/9QkJ4D8HOy pic.twitter.com/hNtEQEWxKI
ಗಾಯದಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಕೇದಾರ್ ಜಾದವ್ 35 ಎಸೆತಗಳಲ್ಲಿ 40, ಜಡೇಜಾ 21 ಎಸೆತಗಳಲ್ಲಿ 21 ರನ್ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ದುಬೆ 9, ಚಹಾರ್ 4,ಶಮಿ 2 ರನ್ಗಳಿಸಿದರು.
ವಿಂಡೀಸ್ ಪರ ಶೆಲ್ಡಾನ್ ಕಾಟ್ರೆಲ್ 2, ಕೀಮೊ ಪಾಲ್ 2, ಅಲ್ಜಾರಿ ಜೋಸೆಪ್ 2 ಹಾಗೂ ಪೊಲಾರ್ಡ್ ಒಂದು ವಿಕೆಟ್ ಪಡೆದರು.