ETV Bharat / sports

ದಕ್ಷಿಣ ಅಫ್ರಿಕಾ ವಿರುದ್ಧ ಗೆಲುವು ತಂಡಕ್ಕೆ ಅಗತ್ಯವಾಗಿತ್ತು: ಬಾಬರ್ ಅಜಮ್ - ನ್ಯೂಜಿಲ್ಯಾಂಡ್ vs ಪಾಕಿಸ್ತಾನ ಟೆಸ್ಟ್​

ಶುಕ್ರವಾರ ಪಾಕಿಸ್ತಾನ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು. ಈ ಸರಣಿಗೂ ಮುನ್ನ ಪಾಕಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಸತತ ಸರಣಿ ಸೋಲು ಕಂಡು ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು. ಇದೀಗ 14 ವರ್ಷಗಳ ನಂತರ ಪಾಕ್​ಗೆ ಪ್ರವಾಸ ಕೈಗೊಂಡಿದ್ದ ಆಫ್ರಿಕನ್ನರ ವಿರುದ್ಧ ಆತಿಥೇಯ ತಂಡ ಗೆಲುವಿನೊಂದಿಗೆ ತವರಿನಲ್ಲಿ ತನ್ನ ಗೆಲುವಿನ ಅಭಿಯಾನ ಆರಂಭಿಸಿದೆ.

Pakistan vs South Africa  test
ಬಾಬರ್ ಅಜಮ್
author img

By

Published : Jan 30, 2021, 3:45 PM IST

ಕರಾಚಿ: ವಿದೇಶದಲ್ಲಿ ಕಠಿಣ ಸರಣಿಗಳನ್ನು ಎದುರಿಸಿದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಪಾಕಿಸ್ತಾನಕ್ಕೆ ಗೆಲುವು ಅಗತ್ಯವಾಗಿತ್ತು ಎಂದು ನಾಯಕ ಬಾಬರ್ ಅಜಮ್ ಹೇಳಿದ್ದಾರೆ.

ಶುಕ್ರವಾರ ಪಾಕಿಸ್ತಾನ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು. ಈ ಸರಣಿಗೂ ಮುನ್ನ ಪಾಕಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಸತತ ಸರಣಿ ಸೋಲು ಕಂಡು ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು. ಇದೀಗ 14 ವರ್ಷಗಳ ನಂತರ ಪಾಕ್​ಗೆ ಪ್ರವಾಸ ಕೈಗೊಂಡಿದ್ದ ಆಫ್ರಿಕನ್ನರ ವಿರುದ್ಧ ಆತಿಥೇಯ ತಂಡ ಗೆಲುವಿನೊಂದಿಗೆ ತವರಿನಲ್ಲಿ ತನ್ನ ಗೆಲುವಿನ ಅಭಿಯಾನ ಆರಂಭಿಸಿದೆ.

ಬಾಬರ್ ಅಜಮ್

"ನಮ್ಮ ತಂಡಕ್ಕೆ ಈ ಗೆಲುವಿನ ಅಗತ್ಯವಿತ್ತು. ಕಳೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ನಾವು ಉತ್ತಮವಾಗಿ ಆಡಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾದಂತಹ ಟಾಪ್ ತಂಡದ ವಿರುದ್ಧ ಗೆಲವು ಸಾಧಿಸಿರುವುದು ಖುಷಿ ತಂದಿದೆ. ಈ ಗೆಲುವಿನಲ್ಲಿ ನಮ್ಮ ವೇಗದ ಬೌಲರ್​ಗಳು, ಫೀಲ್ಡರ್​ಗಳು, ಸ್ಪಿನ್ನರ್ಸ್​ ಮತ್ತು ಬ್ಯಾಟ್ಸ್​ಮನ್​ಗಳ ಪಾತ್ರವಿದೆ" ಎಂದು ಮೊದಲ ಪಂದ್ಯದ ನಂತರ ಬಾಬರ್ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಸೋಲು ಕಂಡ ನಂತರ ಹಲವು ಮಾಜಿ ಕ್ರಿಕೆಟಿಗರು ಕೋಚ್​ಗಳ ವಿರುದ್ಧ ಕಿಡಿಕಾರಿದ್ದರು. ಅದರಲ್ಲೂ ಮುಖ್ಯ ಕೋಚ್​ ಮಿಸ್ಬಾ ಉಲ್ ಹಕ್​ ಮತ್ತು ಬೌಲಿಂಗ್ ಕೋಚ್ ವಾಕರ್ ಯೂನಿಸ್ ವಿರುದ್ಧ ಟೀಕೆಗಳು ಹೆಚ್ಚಾಗಿ ಬಂದಿದ್ದವು.

ಈ ಸರಣಿಯಲ್ಲಿ ಮಿಸ್ಬಾ ಮತ್ತು ವಾಕರ್​ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅವರು ಸೋಲಿನ ಭೀತಿ ಎದುರಿಸುತ್ತಿದ್ದಾರೆ ಎಂಬುದೆಲ್ಲಾ ಗಾಳಿ ಸುದ್ದಿಗಳು. ಅವರು ಡ್ರೆಸ್ಸಿಂಗ್ ರೂಮ್​ನಲ್ಲಿ ಎಂದಿನಂತೆ ಇದ್ದರು. ಕೆಲವೊಮ್ಮೆ ಫಲಿತಾಂಶಗಳು ತಡವಾಗಿ ಬರುತ್ತವೆ. ಕೆಲವೊಮ್ಮೆ ಸರಣಿಗಳು ನಿಮ್ಮ ಪರವಾಗಿ ಹೋಗುವುದಿಲ್ಲ. ಹಾಗಾಗಿ ಸೋಲುಗಳಿಂದ ಪಾಠ ಕಲಿತು, ನಂತರ ಬಲಿಷ್ಠರಾಗಿ ಹಿಂತಿರುಗುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾ 220 ರನ್ ​ಗಳಿಸಿದರೆ, ಇದಕ್ಕುತ್ತರವಾಗಿ ಪಾಕಿಸ್ತಾನ 378 ರನ್ ​ಗಳಿಸಿ 158 ರನ್​ಗಳ ಮುನ್ನಡೆ ಸಾಧಿಸಿತ್ತು. ದಕ್ಷಿಣ ಆಫ್ರಿಕಾ 2ನೇ ಇನ್ನಿಂಗ್ಸ್​ನಲ್ಲಿ 245 ರನ್​ಗಳಿಗೆ ಆಲೌಟ್ ಆಗಿ ಆತಿಥೇಯ ತಂಡಕ್ಕೆ ಕೇವಲ 88 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು ತಲುಪಿತು.

ಇದನ್ನು ಓದಿ:ಸೋತರು, ಗೆದ್ದರೂ ಎದುರಾಳಿ ಆಟಗಾರರು ಹಾಗೂ ಆ ರಾಷ್ಟ್ರವನ್ನು ಗೌರವಿಸಬೇಕು: ಅಜಿಂಕ್ಯ ರಹಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.