ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ನಂತರ ಈ ಸಾಧನೆ ಮಾಡಿದ ಏಕೈಕ ತಂಡ ಪಾಕಿಸ್ತಾನ! - ಪಾಕಿಸ್ತಾನದ ನಾಲ್ವರ ಶತಕ
ಪಾಕಿಸ್ತಾನದ ಪರ ಆರಂಭಿಕರಾದ ಶಾನ್ ಮಸೂದ್ 135, ಅಬಿದ್ ಅಲಿ 174, ಅಜರ್ ಅಲಿ 118 ಹಾಗೂ ಬಾಬರ್ ಅಜಂ ಔಟಾಗದೆ 100 ರನ್ಗಳಿಸುವ ಮೂಲ ಬೃಹತ್ ಮೊತ್ತಕ್ಕೆ ಕಾರಣರಾದರು. ಅಲ್ಲದೆ ಪಾಕಿಸ್ತಾನದ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್ಮನ್ಗಳು ಶತಕ ಸಿಡಿಸಿ ದಾಖಲೆ ಬರೆದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂಡಿಬಂದ ಎರಡನೇ ನಿದರ್ಶನವಾಗಿದೆ.
ಕರಾಚಿ: ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್ಮನ್ಗಳು ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆಗೈದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶ್ರೀಲಂಕಾ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 191 ರನ್ಗಳಿಗೆ ಆಲೌಟ್ ಆಗಿದ್ದ ಪಾಕಿಸ್ತಾನ ಎರಡನೇ ಇನ್ನಿಂಗ್ಸ್ನಲ್ಲಿ 80 ರನ್ಗಳ ಹಿನ್ನೆಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿ ಬರೋಬ್ಬರಿ 555 ರನ್ಗಳ ಶಿಖರ ಕಟ್ಟಿದೆ.
ಪಾಕಿಸ್ತಾನದ ಪರ ಆರಂಭಿಕರಾದ ಶಾನ್ ಮಸೂದ್ 135, ಅಬಿದ್ ಅಲಿ 174, ಅಜರ್ ಅಲಿ 118 ಹಾಗೂ ಬಾಬರ್ ಅಜಂ ಔಟಾಗದೆ 100 ರನ್ಗಳಿಸುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾದರು. ಅಲ್ಲದೆ ಪಾಕಿಸ್ತಾನದ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್ಮನ್ಗಳು ಶತಕ ಸಿಡಿಸಿ ಅಪರೂಪದ ದಾಖಲೆ ಬರೆದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂಡಿಬಂದ ಎರಡನೇ ಅಪರೂಪದ ನಿದರ್ಶನ.
-
It's only the second time when the top four batsmen in a team have scored hundreds in a single innings of a Test 👀
— ICC (@ICC) December 22, 2019 " class="align-text-top noRightClick twitterSection" data="
🇧🇩 v 🇮🇳 in 2007:
Dinesh Karthik
Wasim Jaffer
Rahul Dravid
Sachin Tendulkar
🇵🇰 v 🇱🇰 in 2019:
Shan Masood
Abid Ali
Azhar Ali
Babar Azam pic.twitter.com/M3ezdUAyDK
">It's only the second time when the top four batsmen in a team have scored hundreds in a single innings of a Test 👀
— ICC (@ICC) December 22, 2019
🇧🇩 v 🇮🇳 in 2007:
Dinesh Karthik
Wasim Jaffer
Rahul Dravid
Sachin Tendulkar
🇵🇰 v 🇱🇰 in 2019:
Shan Masood
Abid Ali
Azhar Ali
Babar Azam pic.twitter.com/M3ezdUAyDKIt's only the second time when the top four batsmen in a team have scored hundreds in a single innings of a Test 👀
— ICC (@ICC) December 22, 2019
🇧🇩 v 🇮🇳 in 2007:
Dinesh Karthik
Wasim Jaffer
Rahul Dravid
Sachin Tendulkar
🇵🇰 v 🇱🇰 in 2019:
Shan Masood
Abid Ali
Azhar Ali
Babar Azam pic.twitter.com/M3ezdUAyDK
ಈ ಮೊದಲು ಭಾರತ ತಂಡದ ಬ್ಯಾಟ್ಸ್ಮನ್ಗಳು 2007 ರಲ್ಲಿ ಶ್ರೀಲಂಕಾ ವಿರುದ್ಧವೇ ಈ ಸಾಧನೆ ಮಾಡಿದ್ದರು. ದಿನೇಶ್ ಕಾರ್ತಿಕ್, ವಾಸಿಂ ಜಾಫರ್, ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ವೈಯಕ್ತಿಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.
ಈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್ ಹಿನ್ನೆಡೆಯ ನಡುವೆಯೂ ಶ್ರೀಲಂಕಾ ತಂಡಕ್ಕೆ 475 ರನ್ಗಳ ಬೃಹತ್ ಟಾರ್ಗೆಟ್ ನೀಡಲು ಯಶಸ್ವಿಯಾಗಿದೆ. ಈಗಾಗಲೆ ಶ್ರೀಲಂಕಾ 4ನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದಿಕೊಂಡಿದೆ. ಸೋಮವಾರ ಅಂತಿಮ ದಿನವಾಗಿದ್ದು ಕೇವಲ 3 ವಿಕೆಟ್ ಪಡೆದರೆ ಪಾಕ್ 10 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದ ಸಂಭ್ರಮಕ್ಕೆ ಪಾತ್ರವಾಗಲಿದೆ.