ಲಾಹೋರ್: ತವರು ನೆಲದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕ್ 5ವಿಕೆಟ್ಗಳ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ ನಿಗದಿತ 20 ಓವರ್ಗಳಲ್ಲಿ 5ವಿಕೆಟ್ ಕಳೆದುಕೊಂಡು 141ರನ್ಗಳಿಕೆ ಮಾಡ್ತು. ಆರಂಭಿಕರಾದ ತಮಿಮ್ ಇಕ್ಬಾಲ್(39), ಮೊಹಮ್ಮದ್ ನಯೀಮ್(43) ಉತ್ತಮ ಆರಂಭ ಪಡೆದುಕೊಂಡ್ರು ತಂಡಕ್ಕೆ ಬೃಹತ್ ಮೊತ್ತ ತಂದುಕೊಡುವಲ್ಲಿ ವಿಫಲವಾದರು. ಪಾಕ್ನ ಯಾವೊಬ್ಬ ಬೌಲರ್ ಮಾರಕ ಎಂದು ಅನಿಸಿಕೊಳ್ಳದಿದ್ದರೂ, ಬಾಂಗ್ಲಾ ಬ್ಯಾಟ್ಸ್ಮನ್ಗಳಿಗೆ ರನ್ ನೀಡದಂತೆ ಕಡಿವಾಣ ಹಾಕಿದರು.
142ರನ್ಗಳ ಗುರಿ ಬೆನ್ನತ್ತಿದ ಪಾಕ್ ಆರಂಭದಲ್ಲೇ ಬಾಬರ್ ಆಝಾಮ್(0)ವಿಕೆಟ್ ಕಳೆದುಕೊಳ್ತು. ಇದಾದ ಬಳಿಕ ಒಂದಾದ ಅಲಿ(36) ಹಾಗೂ ಶೊಯೇಬ್ ಮಲಿಕ್ ಅಜೇಯ(58)ರನ್ ತಂಡವನ್ನ ಗೆಲುವಿನ ದಡದತ್ತ ತೆಗೆದುಕೊಂಡು ಹೋದರು. ಈ ಮಧ್ಯೆ ಹಫೀಜ್(17ರನ್), ಅಹ್ಮದ್(16ರನ್)ಗಳಿಕೆ ಮಾಡಿದರು. ಕೊನೆಯದಾಗಿ ತಂಡ 19.3 ಓವರ್ಗಳಲ್ಲಿ 142ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಈ ಜಯದೊಂದಿಗೆ ತಂಡ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಮುಂದಿನ ಪಂದ್ಯ ಲಾಹೋರ್ದಲ್ಲಿ ನಡೆಯಲಿದೆ.