ETV Bharat / sports

ಪಾಕಿಸ್ತಾನಕ್ಕೂ ಧೋನಿಯಂತಹ ನಾಯಕನ ಅಗತ್ಯವಿದೆ: ಕಮ್ರಾನ್​​ ಅಕ್ಮಲ್​

ಆಗಸ್ಟ್​ 15ರಂದು ಎಂ ಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯಾವುದೇ ಸದ್ದು ಸಮಾಚಾರಗಳಿಲ್ಲದೆ ಸರಳವಾಗಿ ಇನ್ಸ್ಟಾಗ್ರಾಮ್​ ಪೋಸ್ಟ್​ ಮೂಲಕ ತಾನು ನಿವೃತ್ತಿ ಹೊಂದುತ್ತಿರುವುದಾಗಿ ಘೋಷಣೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಇರುವ ಅಭಿಮಾನಿಗಳ ಸಹಿತ, ಹಲವು ಕ್ರಿಕೆಟ್​ ದಿಗ್ಗಜರೂ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಕ್ರಮಾನ್​ ಅಕ್ಮಲ್
ಕ್ರಮಾನ್​ ಅಕ್ಮಲ್
author img

By

Published : Aug 20, 2020, 2:47 PM IST

ನವದೆಹಲಿ: ಕ್ರಿಕೆಟ್​ ಮುಂದಕ್ಕೆ ಕೊಂಡೊಯ್ಯಲು ಎಂ ಎಸ್​ ಧೋನಿಯಂತಹ ನಾಯಕರು ಪಾಕಿಸ್ತಾನ ತಂಡಕ್ಕೂ ಅಗತ್ಯವಿದೆ ಎಂದು ಪಾಕಿಸ್ತಾನದ ವಿಕೆಟ್​ ಕೀಪರ್​ ಕಮ್ರಾನ್​ ಅಕ್ಮಲ್​ ಅಭಿಪ್ರಾಯ ಪಟ್ಟಿದ್ದಾರೆ.

ಆಗಸ್ಟ್​ 15ರಂದು ಎಂ ಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯಾವುದೇ ಸದ್ದು ಸಮಾಚಾರಗಳಿಲ್ಲದೆ ಸರಳವಾಗಿ ಇನ್ಸ್ಟಾಗ್ರಾಮ್​ ಪೋಸ್ಟ್​ ಮೂಲಕ ತಾನು ನಿವೃತ್ತಿ ಹೊಂದುತ್ತಿರುವುದಾಗಿ ಘೋಷಣೆ ಮಾಡಿದ್ದರು. ಈ ವಿಚಾರಕ್ಕೆ ವಿಶ್ವದಾದ್ಯಂತ ಇರುವ ಅಭಿಮಾನಿಗಳ ಸಹಿತ, ಹಲವಾರು ಕ್ರಿಕೆಟ್​ ದಿಗ್ಗಜರೂ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಕಮ್ರಾನ್​ ಅಕ್ಮಲ್​, "ನಾಯಕತ್ವವನ್ನು ವಹಿಸಿಕೊಳ್ಳುವುದು ತುಂಬಾ ಸುಲಭ, ನಾನು ನಾಯಕನಾಗಿದ್ದೇನೆ, ತಂಡ ಗೆಲ್ಲುತ್ತದೆಯೋ ಅಥವಾ ಸೋತಿದಿಯೋ ನನ್ನ ಸ್ಥಾನ ಸುರಕ್ಷಿತವಾಗಿರುತ್ತದೆ ಎಂದು ಕೆಲವರ ಆಲೋಚನೆಯಾಗಿರುತ್ತದೆ. ಆದರ ಧೋನಿ ತಮ್ಮ ಜೊತೆಯಲ್ಲೇ ತಂಡವನ್ನು ಕೊಂಡೊಯ್ಯುತ್ತಿದ್ದರು. ತಂಡವನ್ನು ಕಟ್ಟಲು ಶ್ರಮಿಸುತ್ತಿದ್ದರು. ಅವರು ಕಟ್ಟಿದ ತಂಡದ ಪ್ರದರ್ಶನ ವಿಶ್ವಮಟ್ಟದ್ದಾಗಿತ್ತು. ಸ್ವತಃ ಧೋನಿ ಕೂಡ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ ಆಗಿದ್ದರು" ಎಂದು ಅವರು ತಿಳಿಸಿದ್ದಾರೆ.

"ಇಂತಹ ಮಹಾನ್​ ಕ್ರಿಕೆಟಿಗ ಈ ರೀತಿ ವಿದಾಯ ಘೋಷಿಸಬಾರದು. ಮೈದಾನದಲ್ಲಿ ಸಚಿನ್​ ತೆಂಡೂಲ್ಕರ್​ ವಿದಾಯ ಘೋಷಿಸಿದ ಹಾಗೆ ಧೋನಿ ಕೂಡ ನಿವೃತ್ತಿ ಘೋಷಿಸಬೇಕು. ಅವರ ವಿದಾಯವನ್ನು ಎಲ್ಲರೂ ಎದ್ದು ನಿಂತು ಗೌರವಿಸಬೇಕು. ಖಂಡಿತ ಧೋನಿ ವಿದಾಯದ ಪಂದ್ಯವನ್ನು ಆಡಬೇಕು. ಅವರು ನಿವೃತ್ತಿಯ ನಿರ್ಧಾರದಲ್ಲೂ ಮಿಸ್ಟರ್​ ಕೂಲ್​ ಆಗಿದ್ದಾರೆ. ಇಂತಹ ಆಟಗಾರರು ಕ್ರಿಕೆಟ್​ನಲ್ಲಿ ಬಹಳ ವಿರಳವಾಗಿ ಬರುತ್ತಾರೆ" ಎಂದು ಅಕ್ಮಲ್​ ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ದಿನಗಳಲ್ಲಿ ಕ್ರಿಕೆಟಿಗರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವುದಕ್ಕಾಗಿ ಆಡುತ್ತಾರೆ. ಅವರು ತಂಡದ ಗೆಲುವು ಸೋಲುಗಳ ಬಗ್ಗೆ ಯಾವುದೇ ಆಲೋಚನೆ ಮಾಡುವುದಿಲ್ಲ. ಇಂತಹ ಆಲೋಚನೆ ಇರುವವರು ಯಾವುದೇ ತಂಡಕ್ಕಾದರೂ ಹಾನಿಕಾರಕ. ಧೋನಿಯಂತಹ ನಾಯಕ ಪಾಕಿಸ್ತಾನ ತಂಡಕ್ಕೂ ಬರಬೇಕೆಂದು ನಾನು ಬಯಸುತ್ತೇನೆ. ತಾವು ಗೆದ್ದು, ತಂಡದ ಸಾಧನೆ ವಿಶ್ವದರ್ಜೆಯಲ್ಲಿ ಇರದಿದ್ದರೆ, ಬಹುತೇಕರಿಗೆ ಧೋನಿಯಂತೆ ತಂಡವನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ. ಇದನ್ನು ಇಂದಿನ ನಾಯಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ ಕಮ್ರಾನ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.