ETV Bharat / sports

ಶ್ರೀಲಂಕಾ-ಪಾಕಿಸ್ತಾನ ಪಂದ್ಯದ ನಡುವೆ 5 ನಿಮಿಷಗಳಿಗೊಮ್ಮೆ ಫ್ಲಡ್​ಲೈಟ್​ ಆಫ್​! ಟ್ರೋಲ್​ಗೆ ತುತ್ತಾದ ಪಿಸಿಬಿ! - undefined

ಶ್ರೀಲಂಕಾ - ಪಾಕಿಸ್ತಾನ ನಡುವಿನ ಏಕದಿನ ಪಂದ್ಯದ ವೇಳೆ 5 ನಿಮಿಷಕ್ಕೊಮ್ಮೆ ಫ್ಲಡ್​ ಲೈಟ್​ಗಳು ಆಫ್​ ಆಗುತ್ತಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯನ್ನು ಕ್ರಿಕೆಟ್​ ಅಭಿಮಾನಿಗಳು ಟೀಕಿಸಿದ್ದಾರೆ.

pakistan
author img

By

Published : Oct 1, 2019, 5:09 PM IST

ರಾಚಿ: 10 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ನಡೆದ ಕರಾಚಿಯಲ್ಲಿ ಸರಿಯಾದ ಫ್ಲಡ್​ಲೈಟ್​ ವ್ಯವಸ್ಥೆ ಮಾಡದಿರುವುದಕ್ಕೆ ಪಾಕಿಸ್ತಾನ ಪ್ರೇಕ್ಷಕರಿಂದಲೇ ಟ್ರೋಲ್​ಗೊಳಗಾಗಿದೆ.

ಶ್ರೀಲಂಕಾ ವಿರುದ್ಧ ಕರಾಚಿಯ ನ್ಯಾಷನಲ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ ಕ್ರೀಡಾಂಗಣ ಸಹ ಖಾಲಿ ಖಾಲಿಯಾಗಿ ಕಾಣುತ್ತಿತ್ತು. ಇದರ ಮಧ್ಯೆ 5 ನಿಮಿಷಕ್ಕೊಮ್ಮೆ ಫ್ಲಡ್​ ಲೈಟ್​ಗಳು ಆಫ್​ ಆಗಿವೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಅಲ್ಲಿನ ಪರಿಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗಳು ಸ್ಟೇಡಿಯಂ ವ್ಯವಸ್ಥಾಪಕರು ಹಾಗೂ ಪಿಸಿಬಿ ವಿರುದ್ಧ ಕಿಡಿಕಾರಿದ್ದಾರೆ.​

ಇನ್ನು, ಈ ವಿಡಿಯೋಗಳು ವೈರಲ್​ ಆಗುತ್ತಿದ್ದಂತೆ ಭಾರತೀಯರು ಸಖತ್​ ಟ್ರೋಲ್​ ಮಾಡುತ್ತಿದ್ದಾರೆ. 10 ವರ್ಷಗಳ ಬಳಿಕ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿರುವುದಕ್ಕೆ ಫ್ಲಡ್​ಲೈಟ್​​ಗಳು ಸ್ಟ್ರೈಕ್​ ಮಾಡುವ ಮೂಲಕ ಸ್ವಾಗತ ಕೋರಿವೆ ಎಂದು ಕಾಲೆಳೆದಿದ್ದಾರೆ. ಇನ್ನು, ಕೆಲವರು ಇದೇನು ಅಂತಾರಾಷ್ಟ್ರೀಯ ಕ್ರಿಕೆಟೋ ಅಥವಾ ಗಲ್ಲಿ ಕ್ರಿಕೆಟೋ​ ಎಂಬುದು ತಿಳಿಯುತ್ತಿಲ್ಲ ಎಂದು ಪಿಸಿಬಿಯನ್ನು ಟ್ರೋಲ್​ ಮಾಡುತ್ತಿದ್ದಾರೆ.

ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕ್ ಬಾಬರ್​ ಅಜಂರ ಶತಕದ ನೆರವಿನಿಂದ 305 ರನ್​ ಕಲೆ ಹಾಕಿತ್ತು. ಶ್ರೀಲಂಕಾ 238 ರನ್​ಗೆ ಆಲ್​ಔಟ್ ಆಗುವ ಮೂಲಕ​ 67 ರನ್​ಗಳ ಸೋಲು ಕಂಡಿತು. 2009ರಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಗುಂಡಿನ ದಾಳಿ ನಡೆದ ಮೇಲೆ ಜಿಂಬಾಬ್ವೆ(2015) ಹೊರೆತುಪಡಿಸಿ ಯಾವ ರಾಷ್ಟ್ರಗಳು ಪಾಕಿಸ್ತಾನದಲ್ಲಿ ಕ್ರಿಕೆಟ್​ ಆಡಲು ಒಪ್ಪಿರಲಿಲ್ಲ. ಇದೀಗ 10 ವರ್ಷಗಳ ನಂತರ ದಾಳಿಗೊಳಗಾಗಿದ್ದ ಲಂಕಾ ತಂಡವೇ ಪ್ರವಾಸ ಕೈಗೊಂಡಿದೆ. ಆದರೆ, ಪಿಸಿಬಿ ಪಂದ್ಯಗಳನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ವಿಫಲವಾಗುತ್ತಿದೆ.

  • Are they hosting a gully cricket??
    Power off at Karachi..
    Lol#PAKvSL

    — SarcasticDude (@Trouble20680883) September 30, 2019 " class="align-text-top noRightClick twitterSection" data=" ">

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.