ಢಾಕಾ: ಪಾಕಿಸ್ತಾನವು ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ.
-
Chris Gayle said: "Pakistan is one of the safest places in the world!❤😍👌
— Adil Khan (@iamAdilKh) January 9, 2020 " class="align-text-top noRightClick twitterSection" data="
Via | Green Shirts. pic.twitter.com/JRvQtsc6fM
">Chris Gayle said: "Pakistan is one of the safest places in the world!❤😍👌
— Adil Khan (@iamAdilKh) January 9, 2020
Via | Green Shirts. pic.twitter.com/JRvQtsc6fMChris Gayle said: "Pakistan is one of the safest places in the world!❤😍👌
— Adil Khan (@iamAdilKh) January 9, 2020
Via | Green Shirts. pic.twitter.com/JRvQtsc6fM
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಿಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದೈತ್ಯ, ಕ್ರಿಸ್ ಗೇಲ್ ಪಾಕಿಸ್ತಾನವನ್ನ ಪ್ರಪಂಚದ ಸುರಕ್ಷಿತ ಸ್ಥಳಗಳಲ್ಲಿ ಒಂದು ಎಂದಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಗೇಲ್, 'ಸದ್ಯ ಪಾಕಿಸ್ತಾನವು ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. ಅಧ್ಯಕ್ಷರಿಗೆ ನೀಡುವ ಭದ್ರತೆ ನೀಡುತ್ತೇವೆ ಎಂದು ಅವರು ಹೇಳುತ್ತಾರೆ. ಹಾಗಿದ್ದರೆ ನಾವು ಸುರಕ್ಷಿತ ಎಂದರ್ಥ. ಬಾಂಗ್ಲಾದಲ್ಲೂ ನಾನು ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ ಗೇಲ್.
ಇತ್ತೀಚೆಗಷ್ಟೆ ಶ್ರೀಲಂಕಾ ತಂಡ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.10 ವರ್ಷಗಳ ಬಳಿಕ ಕ್ರಿಕೆಟ್ ತಂಡವೊಂದು ಪಾಕಿಸ್ತಾನಕ್ಕೆ ತೆರಳಿ ಯಶಸ್ವಿಯಾಗಿ ಟೂರ್ನಿ ಮುಗಿಸಿಕೊಂಡು ತವರಿಗೆ ವಾಪಸ್ ಆಗಿತ್ತು.
ಶ್ರೀಲಂಕಾ ಟೂರ್ನಿ ಯಾಶಸ್ವಿಯಾಗುತ್ತಿದ್ದಂತೆ ಮಾತನಾಡಿದ್ದ ಪಿಸಿಬಿ ಮುಖ್ಯಸ್ಥ ಇಶಾನ್ ಮಣಿ, ಪಾಕಿಸ್ತಾನ ಸುರಕ್ಷಿತ ದೇಶ ಎಂದು ನಾವು ಸಾಭೀತುಪಡಿಸಿದ್ದೇವೆ. ಯಾವುದಾದರು ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎನ್ನುವುದಾದದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ಹೇಳಿದ್ದರು.