ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವೆ ರಾಜಕೀಯ ಕಾರಣಗಳಿಂದ 2012ರಿಂದ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಇನ್ನು ಎರಡು ರಾಷ್ಟ್ರಗಳು ತಟಸ್ಥ ಸ್ಥಳದಲ್ಲಿ ನಡೆಯುವ ಏಷ್ಯಾಕಪ್ ಹಾಗೂ ಐಸಿಸಿ ವಿಶ್ವಕಪ್ನಲ್ಲಿ ಮಾತ್ರ ಎದುರುಬದುರಾಗುತ್ತಿವೆ.
ಪಾಕಿಸ್ತಾನ ಪರ 4 ವಿಶ್ವಕಪ್ಗಳಲ್ಲಿ ಕಾಣಿಸಿಕೊಂಡಿರುವ ರಜಾಕ್ ಭಾರತದ ವಿರುದ್ಧ ಮುಂದಿನ ವಿಶ್ವಕಪ್ಗಳಲ್ಲಿಯೂ ಪಾಕಿಸ್ತಾನ ತಂಡ ಸೋಲುಕಾಣಲಿದೆ. ನಮ್ಮ ವಿರುದ್ಧ ಭಾರತದ ವಿಶ್ವಕಪ್ ಜಯದ ಓಟ ಮುಂದುವರಿಯಲಿದೆ ಎಂದು ರಜಾಕ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ 1992 ಹಾಗೂ 1999 ಎರಡು ಭಾರಿ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ್ದರು ಲೀಗ್ ಮತ್ತು ಸೂಪರ್ ಸಿಕ್ಸ್ ಹಂತದಲ್ಲಿ ಭಾರತದೆದುರು ಮಾತ್ರ ಮುಗ್ಗರಿಸಿತ್ತು. ಇಷ್ಟಲ್ಲದೆ 1996 , 2003, 2011, 2015 ಹಾಗೂ 2019 ವಿಶ್ವಕಪ್ಗಳಲ್ಲೂ ಭಾರತ ಪಾಕ್ ವಿರುದ್ಧ ಸೋಲುಕಂಡಿತ್ತು. ಇದೀಗ ಮುಂದಿನ ವಿಶ್ವಕಪ್ಗಳಲ್ಲೂ ಭಾರತದ ಈ ದಾಖಲೆ ಮುಂದುವರಿಯಲಿದೆ ಎಂದು ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಭಾರತ ತಂಡ ವಿಶ್ವಕಪ್ನಲ್ಲಿ ತನ್ನ ದಾಖಲೆಯನ್ನು ಮುಂದುವರಿಸಲಿದೆ. ಭಾರತ-ಪಾಕ್ ತಂಡಗಳು ಸೆಮಿಫೈನಲ್ ಪಂದ್ಯಗಳಲ್ಲಿ ಮುಖಾಮುಖಿಯಾಗುವುದು ತುಂಬಾ ವಿರಳ. ಅತಿ ಹೆಚ್ಚು ಪಂದ್ಯಗಳನ್ನು ಲೀಗ್ ಹಂತದಲ್ಲೇ ಆಡಲಿದೆ. ಅಲ್ಲಿ ಭಾರತ ಪ್ರಾಬಲ್ಯ ಸಾಧಿಸಲಿದೆ. ಏಕೆಂದರೆ ನಮ್ಮ ಆಟಗಾರರು ಒತ್ತಡವನ್ನು ನಿಭಾಯಿಸಲಾರರು ಎಂದು ರಜಾಕ್ ತಿಳಿಸಿದ್ದಾರೆ.
ನಾವು ಭಾರತದೆದರು ಸಾಕಷ್ಟು ಪಂದ್ಯಗಳನ್ನು ಗೆದ್ದಿದ್ದೇವೆ. ಶಾರ್ಜಾ, ಕೆನಡಾಗಳಲ್ಲಿ ನಡೆದ ಪಂದ್ಯಗಳಲ್ಲೂ ಜಯ ಸಾಧಿಸಿದ್ದೆವು. 1999 ವಿಶ್ವಕಪ್ನ ಘಟನೆ ನನಗೆ ಇನ್ನೂ ನೆನಪಿದೆ. ಆ ಸಂದರ್ಭದಲ್ಲಿ ಮಿಡಿಯಾ ಹಾಗೂ ಜನರು ಆಟಗಾರರ ಮೇಲೆ ಒತ್ತಡವೇರಿದ್ದರು. ನಾವು ಅದರಿಂದ ಮುದುರಿಕೊಂಡೆವು. ಅದು ಹಾಗೆಯೇ ಮುಂದುವರಿಯುತ್ತಾ ಬಂದಿದೆ ಎಂದು ರಜಾಕ್ ತಿಳಿಸಿದ್ದಾರೆ.
ಒತ್ತಡ ಏರುತ್ತಿದ್ದಂತೆ ಆಟಗಾರರಲ್ಲಿ ಭಾರತವನ್ನು ಮಣಿಸಲಾರೆವು ಎನ್ನುವ ಮನೋಭಾವನೆ ಬಂದುಬಿಡುತ್ತದೆ. ಆದರೂ 2011ರಲ್ಲಿ ಭಾರತವನ್ನು ಮಣಿಸುವ ಅವಕಾಶ ಸಿಕ್ಕಿತ್ತಾದರೂ ಸ್ವಲ್ಪದರಲ್ಲಿ ಎಡವಿದೆವು ಎಂದು ರಜಾಕ್ ಹೇಳಿದ್ದಾರೆ.
ಭಾರತ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ. ಆಡಿರುವ 7 ಪಂದ್ಯಗಳಲ್ಲೂ ದಿಗ್ವಿಜಯ ಸಾಧಿಸಿದೆ. ಟಿ20 ವಿಶ್ವಕಪ್ನಲ್ಲೂ 5-0ಯಲ್ಲಿ ಮುನ್ನಡೆ ಸಾಧಿಸಿಕೊಂಡು ಬರುತ್ತಿದೆ.