ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ಐತಿಹಾಸಿಕ ವಿಜಯ ಸಾಧಿಸಿರೋದು ತಮ್ಮ ಜೀವನದ ಅತ್ಯಂತ ಶ್ರೇಷ್ಠ ಕ್ಷಣಗಳಲ್ಲಿ ಒಂದಾಗಿದೆ ಎಂದು ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಹೇಳಿದ್ದಾರೆ.
ಸರಣಿ ನಿರ್ಣಯಿಸುವ ಬ್ರಿಸ್ಬೇನ್ ಟೆಸ್ಟ್ನಲ್ಲಿ ಪಂತ್ 89ರನ್ ಸಿಡಿಸುವ ಮೂಲಕ ಗೆಲುವಿನ ರೂವಾರಿಯಾಗಿದ್ದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸೀಸ್ ನೆಲದಲ್ಲಿ ಸತತ 2ನೇ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಜಯಿಸಿದೆ. ಇನ್ನು, ಇದೇ ಪಂದ್ಯದಲ್ಲಿ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
-
Pic 1: How it started
— ICC (@ICC) January 19, 2021 " class="align-text-top noRightClick twitterSection" data="
Pic 2: How it's going#AUSvIND pic.twitter.com/V61VAqq23R
">Pic 1: How it started
— ICC (@ICC) January 19, 2021
Pic 2: How it's going#AUSvIND pic.twitter.com/V61VAqq23RPic 1: How it started
— ICC (@ICC) January 19, 2021
Pic 2: How it's going#AUSvIND pic.twitter.com/V61VAqq23R
ಇದೊಂದು ನನ್ನ ಜೀವನದ ಅತಿದೊಡ್ಡ ಕ್ಷಣವಾಗಿದೆ. ಕೋಚ್ಗಳು ಹಾಗೂ ನನ್ನ ಸಹ ಆಟಗಾರರು ನಾನು ಉತ್ತಮ ಪ್ರದರ್ಶನ ತೋರದಿದ್ದ ಸಂದರ್ಭದಲ್ಲೂ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಪಂದ್ಯ ಮುಗಿದ ನಂತರ ಪಂತ್ ಹೇಳಿದ್ದಾರೆ.
ಇದೊಂದು ನನ್ನ ಕನಸಿನ ಸರಣಿಯಾಗಿದೆ. ಟೀಂ ಮ್ಯಾನೇಜ್ಮೆಂಟ್ ಸದಾ ನನಗೆ ಬೆಂಬಲ ನೀಡುತ್ತದೆ. ಅವರು ನೀನೊಬ್ಬ ಮ್ಯಾಚ್ ವಿನ್ನರ್, ನೀನು ತಂಡಕ್ಕೆ ಗೆಲುವು ತಂದುಕೊಡಬೇಕೆಂದು ಸದಾ ಹೇಳುತ್ತಿದ್ದರು. ನಾನೂ ಕೂಡ ಭಾರತಕ್ಕಾಗಿ ಪಂದ್ಯಗಳನ್ನು ಗೆದ್ದುಕೊಡಲು ಬಯಸುತ್ತಿದ್ದೆ, ಅದರ ಬಗ್ಗೆ ಪ್ರತಿದಿನ ಯೋಚಿಸುತ್ತಿದ್ದೆ, ಇಂದು ನಾನು ಅದನ್ನು ಮಾಡಿದ್ದೇನೆ ಎಂದು ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
ಇದನ್ನು ಓದಿ:ಗಬ್ಬಾದಲ್ಲಿ ಘರ್ಜಿಸಿ ಐಸಿಸಿ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೇರಿದ ಭಾರತ ತಂಡ..