ಹೈದರಾಬಾದ್: ಇಂದು ಟೀಂ ಇಂಡಿಯಾದ ಮೂವರು ಸ್ಟಾರ್ ಆಟಗಾರರಿಗೆ ಜನ್ಮದಿನ ಸಂಭ್ರಮ. ಈ ಮೂರು ಜನ ಕ್ರಿಕೆಟಿಗರು ಭಾರತ ಕ್ರಿಕೆಟ್ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಒಬ್ಬರು ಪ್ರತಿಭಾವಂತ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಇನ್ನೊಬ್ಬರು ಟೀಂ ಇಂಡಿಯಾದ ಹೊಸ ಫಿನಿಶರ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ, ಮತ್ತೊಬ್ಬರು ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ. ಈ ಮೂವರು ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ಬ್ಲೂ ಆರ್ಮಿಯ ಪ್ರತಿಭಾವಂತ ಯುವ ಬ್ಯಾಟ್ಸ್‌ಮನ್. ಹಾಗೆಯೇ ಉತ್ತಮ ನಾಯಕನು ಕೂಡಾ ಹೌದು. ಇವರು ಡಿಸೆಂಬರ್ 6, 1994ರಲ್ಲಿ ಮುಂಬೈಯಲ್ಲಿ ಜನಿಸಿದರು. ಈ ಬಾರಿಯ ಐಪಿಎಲ್ ಟೂರ್ನಿ ಡೆಲ್ಲಿ ತಂಡಕ್ಕೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಇವರು, ತಮ್ಮ ತಂಡವನ್ನು ಉತ್ತಮವಾಗಿ ಲೀಡ್ ಮಾಡಿ ಫೈನಲ್ ತಲುಪಿಸಿದ್ದರು.
ಅಯ್ಯರ್ 2017 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಶ್ರೇಯಸ್ ಅಯ್ಯರ್ 21 ಪಂದ್ಯಗಳನ್ನಾಡಿದ್ದು 44.83ರ ಸರಾಸರಿಯಲ್ಲಿ 807 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 8 ಅರ್ಧ ಶತಕ ಸಿಡಿಸಿದ್ದಾರೆ. 2017 ರಲ್ಲೇ ಟಿ-20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಇವರು 22 ಪಂದ್ಯಗಳಲ್ಲಿ 417 ರನ್ ಗಳಿಸಿದ್ದಾರೆ.
ಓದಿ:ಲಾರಾ ಘೋಷಿಸಿದ ಈ ಯುಗದ ಶ್ರೇಷ್ಠ ಬ್ಯಾಟ್ಸ್‌ಮನ್-ಬೌಲರ್ಗಳ ಪಟ್ಟಿಯಲ್ಲಿ ಕೊಹ್ಲಿ-ಬುಮ್ರಾ!
ರವೀಂದ್ರ ಜಡೇಜಾ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್. ಇವರು ಡಿಸೆಂಬರ್ 6, 1988 ರಲ್ಲಿ ಜನಿಸಿದರು. ಶ್ರೀಲಂಕಾ ವಿರುದ್ಧ 2009ರಲ್ಲಿ ಟೀಂ ಇಂಡಿಯಾ ಪರ ಡೇಬ್ಯುಟ್ ಮಾಡಿದರು. ಟೀಂ ಇಂಡಿಯಾ ಪರ ಇಲ್ಲಿಯವರೆಗೆ 168 ಏಕದಿನ ಪಂದ್ಯಗಳನ್ನಾಡಿದ್ದು, 2,411ರನ್ ಸಿಡಿಸಿದ್ದಾರೆ. ಬೌಲಿಂಗ್ನಲ್ಲಿ 168 ಏಕದಿನ ಪಂದ್ಯಗಳಲ್ಲಿ 188 ವಿಕೆಟ್ ಪಡೆದಿದ್ದಾರೆ. 49 ಟೆಸ್ಟ್ ಪಂದ್ಯ ಆಡಿದ್ದು, 1869 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 14 ಅರ್ಧ ಶತಕ ಸಿಡಿಸಿದ್ದಾರೆ. ಟೆಸ್ಟ್‌ನಲ್ಲಿ 24.62 ಸರಾಸರಿಯಲ್ಲಿ 213 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಟೀಂ ಇಂಡಿಯಾ ಪರ ಟಿ-20 ಕ್ರಿಕೆಟ್ನಲ್ಲಿ 50 ಪಂದ್ಯಗಳಲ್ಲಿ 217 ರನ್ ಸಿಡಿಸಿದ್ದು, ಬೌಲಿಂಗ್ನಲ್ಲಿ 39 ವಿಕೆಟ್ ಪಡೆದಿದ್ದಾರೆ.
ಜಸ್ಪ್ರಿತ್ ಬುಮ್ರಾ ಅವರು1993 ರ ಡಿಸೆಂಬರ್ 6 ರಂದು ಅಹಮದಾಬಾದ್‌ನಲ್ಲಿ ಜನಿಸಿದರು. ಬುಮ್ರಾ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಹಾಗೂ ಏಕದಿನ ಪಾರ್ಮೆಟ್ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ 68 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 67 ಪಂದ್ಯಗಳಲ್ಲಿ 4.65 ಏಕನಾಮಿಯಲ್ಲಿ 108 ವಿಕೆಟ್ ಪಡೆದಿದ್ದಾರೆ. ಟಿ-20ಯಲ್ಲಿ 50 ಪಂದ್ಯಗಳಲ್ಲಿ 6.66 ಏಕನಾಮಿಯಲ್ಲಿ 59 ವಿಕೆಟ್ ಪಡೆದಿದ್ದಾರೆ.